ನವದೆಹಲಿ:
1980ರಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆಯ ಕರಾಳ ನೆನಪು ಇನ್ನೂ ಸಿಖ್ ಸಮುದಾಯದಿಂದ ಮಾಸದಿರುವಂತಹ ಸಂದರ್ಭದಲ್ಲಿ ನಾಳೆ ಈ ಮಾರಣಹೋಮಕ್ಕೆ ಕಾರಣವಾದ ಕಾಂಗ್ರೇಸ್ ಮುಖಂಡ ಸಜ್ಜನ್ ಕುಮಾರ್ ಭವಿಷ್ಯ ನಿರ್ಧಾರವಾಗಲಿದೆ.ಈ ಹಿಂದೆ ಸಜ್ಜನ್ ಒಬ್ಬ ಸಜ್ಜನ ಎಂದಿದ್ದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹಾಕಿದ್ದಂತಹ ರಿಟ್ ಅರ್ಜಿಯ ತೀರ್ಪು ನಾಳೆ ಪ್ರಕಟವಾಗಲಿದೆ
ಸಿಖ್ ವಿರೋಧಿ ದಂಗೆ, ಸಂತ್ರಸ್ತರು ಹಾಗೂ ಆರೋಪಿಗಳ ಬಗ್ಗೆ ಸಿಬಿಐ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 29 ರಂದು ಪೂರ್ಣಗೊಳಿಸಿದ ನ್ಯಾಯಾಧೀಶರಾದ ಎಸ್. ಮುರಳೀಧರ್ ಹಾಗೂ ವಿನೋದ್ ಗೋಯಲ್ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿದೆ.