ಕೊಲ್ಕೋತಾ:
ಎಡ ಪಂಕ್ತೀಯ ನಾಯಕರಲ್ಲಿ ಮುಂಚೂಣಿನಾಯಕರಾದ ಶ್ರೀ ನಿರುಪಮ್ ಸೇನ್ ಅವರು ಬಹು ಅಂಗ ವೈಫಲ್ಯದಿಂದ ತೀವ್ರ ನಿಘಾ ಘಟಕಲ್ಲಿದ್ದ ಅವರು ಇಂದು ಆಸ್ಪತ್ರೆಯಲ್ಲಿ ವಿಧವಶರಾಗಿದ್ದಾರೆ ಕೆಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ .
ಇವರು ಸಿಪಿಐಎಂ ಸರ್ಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾಗಿ ಕೆಲಸ ಮಾಡಿದ್ದರು. ದಿವಂಗತರು ಓರ್ವ ಪುತ್ರಿ , ಪುತ್ರ ಹಾಗೂ ಪತ್ನಿಯನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.
ಇಂಧು ಮುಂಜಾನೆ 5.10 ಸಮಯದಲ್ಲಿ ತೀವ್ರತರನಾದ ಹೃದಯಾಘಾತದಿಂದ ನಿಧನರಾಗಿದ್ದಾರೆ ೆಂದು ವೈದ್ಯರು ಸ್ಪಷ್ಟ ಪಡಿಸಿದ್ದಾರೆ , ಈ ತಿಂಗಳ ಆರಂಭದಿಂದಲೂ ಸೇನ್ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು, ಹೀಗಾಗಿ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿತ್ತು ಎಂದು ಮೂಲ್ಗಳು ತಿಳಿಸಿವೆ ಮತ್ತು ಇವರ ಸಾವಿಗೆ ಗಣ್ಯರು ತಮ್ಮ ಅಶ್ರು ನಮನ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ .