ನವದೆಹಲಿ
ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ್ದ ಯೋಗಿ ಆದಿತ್ಯನಾಥ್ ಅವರು ಸಚಿವ ಸಂಪುಟ ಸಭೆ ನಡೆಸಿ, ತನ್ನೆಲ್ಲಾ ಸಚಿವರೊಂದಿಗೆ ಪುಣ್ಯ ಸ್ನಾನ ಮಾಡಿರುವುದನ್ನು ಅವಹೇಳನ ಮಾಡಿ ಅಪರೂಪಕ್ಕೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ ಯೋಗಿ ಆದಿತ್ಯನಾಥರನನ್ನು ಅಪಹಾಸ್ಯ ಮಾಡಿದ್ದಾರೆ . ‘ಗಂಗೆಯೂ ಶುದ್ಧೀಕರಣವಾ ಗಬೇಕು , ಪಾಪಗಳೂ ತೊಳೆದು ಹೋಗಬೇಕು. ಸಂಗಮದಲ್ಲಿ ಪ್ರತಿಯೊಬ್ಬರೂ ಬೆತ್ತಲು. ಜೈ ಗಂಗಾ ಮಾತೆ’ ಎಂಬ ತರೂರ್ ಟ್ವೀಟ್ ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ.
गंगा भी स्वच्छ रखनी है और पाप भी यहीं धोने हैं। इस संगम में सब नंगे हैं!
जय गंगा मैया की! pic.twitter.com/qAmHThAJjD— Shashi Tharoor (@ShashiTharoor) January 29, 2019
ಶಶಿ ತರೂರ್ ಹೇಳಿಕೆ ಧಾರ್ಮಿಕ ನಿಂದನೆಗೆ ಸಮ. ಜನಿವಾರ ತೊಡುವೆ ಎಂದು ಹೇಳುವ ರಾಹುಲ್ ಅವರು ಈ ಬಗ್ಗೆ ಉತ್ತರ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಕೋಟ್ಯಂತರ ಹಿಂದುಗಳ ನಂಬಿಕೆ ಹಾಲುಗೆಡವಲು ಏಕೆ ಅನುಮತಿ ನೀಡಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನೆ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
