ಅಂತರ್ಜಾಲ ಮೂಲಭೂತ ಹಕ್ಕಲ್ಲ : ರವಿಶಂಕರ್ ಪ್ರಸಾದ್

ನವದೆಹಲಿ

   ಸದ್ಯ ಭಾರತದ ನೂತನ ಪೀಳಿಗೆ ಸಂವಹನ ಮತ್ತು ಪ್ರಚಲಿತ ಸುದ್ದಿಗಾಗಿ ಬಳಸುತ್ತಿರುವ ಸಾಮಾಜಿಕ ಜಾಲತಾಣಗಳು, ಇಂಟರ್‌ನೆಟ್‌ ಮೂಲಭೂತ ಹಕ್ಕುಗಳಲ್ಲಾ  ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್ ಹೇಳಿದ್ದಾರೆ.

   “ಇಂಟರ್‌ನೆಟ್‌ನ ಸಂವಹನ ಸಿದ್ಧಾಂತ ಮತ್ತು ನಿರೂಪಣೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆಯೇ ಹೊರತು ಅದು ಮೂಲಭೂತ ಹಕ್ಕೆಂದು ಹೇಳಿಲ್ಲ ಎಂದಿದ್ದಾರೆ. ಇಂಟರ್‌ನೆಟ್‌ ಜೊತೆಗೆ ದೇಶದ ಭದ್ರತೆಯೂ ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ. 

    ಇಂಟರ್‌ನೆಟ್‌ ಮೂಲಕ ಕಾಶ್ಮೀರ ದಲ್ಲಿ ಭಯೋತ್ಪಾದನೆ ಬೆಳೆಸಲು ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಡಬೇಕೇ ಎಂದು ರವಿಶಂಕರ್ ಪ್ರಶ್ನಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ದೂರವಾಣಿ ಮತ್ತು ಇಂಟರ್‌ನೆಟ್‌ ಸೌಲಭ್ಯ ಮುಂದುವರಿಸಲಾಗಿದ್ದು, ಸದ್ಯ ಅಲ್ಲಿ 783 ವೆಬ್‌ಸೈಟ್‌ಗಳನ್ನು ಗ್ರಾಹಕರ ಬಳಕೆಗೆ ಮುಕ್ತಗೊಳಿಸಲಾಗಿದೆ ಎಂದು ಸಚಿವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ