ಬೆಂಗಳೂರು
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ ಮಿಷನ್ ನ ವಿಕ್ಷಮ್ ಕೈಕೊಟ್ಟರೂ ಆರ್ಬಿಟರ್ ಮಾತ್ರ ಇನ್ನು ಸುತ್ತುವರಿಯುವ ಮೂಲಕ ಚಂದ್ರನ ಮೇಲ್ಮೈ ಅಧ್ಯಯನಕ್ಕೆ ಸಹಾಯ ಮಾಡುತ್ತಲೆ ಇದೆ ,ಸೆ.30ರ ಮಧ್ಯ ರಾತ್ರಿ ವೇಳೆಯಲ್ಲಿ ಸೌರ ಜ್ವಾಲೆಗಳನ್ನು ಪತ್ತೆಹಚ್ಚಿದೆ. ಇದು ಚಂದ್ರನ ಮೇಲ್ಮೈಯಲ್ಲಿ ಯಾವ ಕಾರಣದಿಂದ ಸೃಷ್ಟಿಯಾಗಿದೆ ಎಂಬುದನ್ನು ಅಧ್ಯಯನ ನಡೆಸಲು ಮಹತ್ವದ ಸುಳಿವು ನೀಡಲಿದೆ ಎಂದು ಇಸ್ರೋ ತಿಳಿಸಿದೆ.
ಆರ್ಬಿಟರ್‌ನ ಸೋಲಾರ್ ಎಕ್ಸ್-ರೇ ಮಾನಿಟರ್ ಸಹಾಯದಿಂದ ಸೌರ ಜ್ವಾಲೆಗಳನ್ನು ಪತ್ತೆಹಚ್ಚುವ ಮೂಲಕ ಹೊಸ ಮೈಲಿಗಲ್ಲೊಂದನ್ನು ಸೃಷ್ಠಿಸಿದೆ. ಚಂದ್ರನ ಮೇಲೆ ಖನಿಜಗಳ ಅಸ್ತಿತ್ವ ವನ್ನು ಅಂತಿಮವಾಗಿ ಪರೀಕ್ಷಿಸುವ ಗುರಿ ಹೊಂದಿರುವ ನೌಕೆಯ ಸಾಮರ್ಥ್ಯವನ್ನು ಇದು ಸಾಬೀತುಪಡಿಸಿದೆ ಎಂದು ಇಸ್ರೋ ತಿಳಿಸಿದೆ.
ಚಂದ್ರ ಮತ್ತು ಸೂರ್ಯನ ಪ್ರಸ್ತುತ ಇರುವ ಭಾಗದಲ್ಲಿ ಆರ್ಬಿಟರ್ ಸಾಗುತ್ತಿರುವ ಕೋನವು ಅನುಕೂಲಕರವಾಗಿಲ್ಲದೆ ಇರುವುದರಿಂದ ಆರ್ಬಿಟರ್‌ನ ಗ್ರಹಿಕೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ಆಗುತ್ತಿಲ್ಲ ಎಂದು ಇಸ್ರೋ ತಿಳಿಸಿದೆ. ಆದರೂ ಚಂದ್ರಯಾನ ಆರ್ಬಿಟರ್‌ನಲ್ಲಿರುವ ಪ್ರಮುಖ ಸಾಧನವೊಂದು ಹೊಸ ಅಂಶ ಪತ್ತೆ ಮಾಡಿರುವುದು ಮಹತ್ವದ ವಿಚಾರವಾಗಿದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
