ಹೊಸ ಮೀಸಲಾತಿ ವಿರೋಧಿಸಿ ಹೈಕೋರ್ಟ್ ಗೆ ಮನವಿ…!!

ಚೆನ್ನೈ:

      ಕೇಂದ್ರ ಸರ್ಕಾರ ಸದ್ಯ ತರಲು ಇಚ್ಚಿಸಿರುವ ಹೊಸ ಮೀಸಲಾತಿ ನಿಯಮಕ್ಕೆ ವಿರುಧವಾಗಿ ಧ್ವನಿಗಳು ನಿಧಾನವಾಗಿ ಒಟ್ಟುಗೂಡುತ್ತಿವೆ.   ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರ ಜಾರಿ ತಂದಿರುವ ಕಾಯ್ದೆಯನ್ನು ವಿರೋಧಿಸಿ ಡಿಎಂಕೆ ಇಂದು ಮದ್ರಾಸ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ ೆಂದು ತಿಳಿದು ಬಂದಿದೆ.

       ಡಿಎಂಕೆ ಪಕ್ಷದ ಆರ್ ಎಸ್ ಭಾರತಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ, ಹಲವಾರು ವರ್ಷಗಳಿಂದ ಸಮಾಜದಲ್ಲಿ ತಾರತಮ್ಯ ಎದುರಿಸುತ್ತ ತುಳಿತಕ್ಕೊಳಗಾದವರ ಒಬಿಸಿ, ಎಸ್ಸಿ, ಎಸ್ಟಿಯಂತಹ ಹಿಂದುಳಿದ ಸಮುದಾಯಗಳ ಉನ್ನತಿಗೆ ತರಲಾಗಿರುವ ಮೀಸಲಾತಿ ಕಾಯ್ದೆಯನ್ನು ಅದಕ್ಕೆ ಮಾತ್ರ ಬಳಸಿದರೆ ಕಾಯ್ದೆಗೆ ನ್ಯಾಯ ಒದಗಿಸಿದಂತಾಗುತ್ತದೆ. ಅದು ಸಮಾನತೆ ಕಾಯ್ದೆಗೆ ಹೊರತಾದ ಕಾಯ್ದೆ ಎಂದು ವಿವರಿಸಲಾಗಿದೆ ಎಂದು ಸುದ್ಧಿಗಾರರಿಗೆ ತಿಳಿಸಿದ್ದಾರೆ .

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link