ಕರ್ನಾಟಕ ಚುನಾವಣೆಗೆ ಬಿಜೆಪಿ ಮಾಡಿದ ಖರ್ಚು ಎಷ್ಟು ಗೊತ್ತಾ???

ನವದೆಹಲಿ:

     ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸೀಟು ಗಳಿಸಲು ಖರ್ಚು ಮಾಡಿದ್ದು ಎಷ್ಟು ಎಂದು ನೋಡಿದರೆ ಒಂದು ಕ್ಷಣ ಎದೆ ಝಲ್ ಎನ್ನುತ್ತದೇ.

    ಬಿಜೆಪಿ ಮಾಡಿದ ಖರ್ಚು ನೋಡುವುದಾದರೆ ಅಕ್ಷರಸಹ 122 ಕೋಟಿ ರೂಪಾಯಿ ಇದು ನಮ್ಮ ಕರ್ನಾಟಕದ ವಿಷಯವಾದರೆ ಇನ್ನು  ಈಶಾನ್ಯ ರಾಜ್ಯಗಳಲ್ಲಿ 14 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಚುನಾವಣಾ ಖರ್ಚು ವೆಚ್ಚ ವಿವರಗಳಿಂದ ಬಹಿರಂಗಗೊಂಡಿದೆ .

     ನಾಲ್ಕು ರಾಜ್ಯಗಳಲ್ಲಿನ ಚುನಾವಣಾ ವೆಚ್ಚಗಳ ಬಗ್ಗೆ ಬಿಜೆಪಿ ಇತ್ತೀಚೆಗೆ ವಿವರ ಸಲ್ಲಿಸಿದ್ದು ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗೆ 122.68 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ತೋರಿಸಿದೆ. ಚುನಾವಣೆಯ ಫಲಿತಾಂಶದ ನಂತರದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿತ್ತು ಇದರಿಂದ ಅತಿದೊಡ್ಡ ಪಕ್ಷವಾದರು ಅಧಿಕಾರ ದಕ್ಕಿಸಿಕೊಳ್ಳುವಲ್ಲಿ ವಿಫಲವಾಯಿತು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ