ನರೇಂದ್ರ ಮೋದಿ ಮನೆಗೆ ತೆರಳಲು ಸಕಾಲ : ರಾಹುಲ್ ಗಾಂಧಿ

ನವದೆಹಲಿ

          ನ್ಯಾಷನಲ್ ಸ್ಯಾಂಪಲ್ ಸರ್ವೆ ಕಚೇರಿ (ಎನ್‍ಎಸ್‍ಎಸ್‍ಒ)ವರದಿ ಸೋರಿಕೆಯಾಗಿದ್ದು 2017-18ನೇ ಸಾಲಿನಲ್ಲಿ ನಿರುದ್ಯೋಗಿ ಯುವಜನತೆಯ ಪ್ರಮಾಣ ಹೆಚ್ಚಳವಾಗಿದೆ ಎಂದು ತಿಳಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮನೆಗೆ ತೆರಳಲು ಇದು ಸಕಾಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

          ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ರಾಹುಲ್‍, “ನೋಮೋ ಜಾಬ್ಸ್-ನಮೋ ಆಡಳಿತಾವಧಿಯಲ್ಲಿ ಯುವಜನತೆಗೆ ಉದ್ಯೋಗವಿಲ್ಲ. 45 ವರ್ಷಗಳಲ್ಲಿ ನಿರುದ್ಯೋಗ ದರ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, 2017- 18ನೇ ಸಾಲಿನಲ್ಲಿ 6. 5 ಕೋಟಿ ಯುವ ನಿರುದ್ಯೋಗಿಗಳಿದ್ದಾರೆ ಎಂದು ಎನ್‍ಎಸ್‍ಎಸ್‍ಒ ಸಮೀಕ್ಷೆ ತಿಳಿಸಿದೆ. ಹೀಗಾಗಿ ನಮೋ ಮನೆಗೆ ತೆರಳಲು ಸೂಕ್ತ ಸಮಯ” ಎಂದಿದ್ದಾರೆ.

           ತಮ್ಮ ಟ್ವೀಟ್ ಜತೆ ನಿರುದ್ಯೋಗ ದರದ ಬಗೆಗಿನ ಎನ್‍ಎಸ್‍ಎಸ್‍ಒ ಸಮೀಕ್ಷೆಯನ್ನೂ ಲಗತ್ತಿಸಿರುವ ರಾಹುಲ್, ನಿರುದ್ಯೋಗ ದರ ಹೆಚ್ಚಳವಾಗಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಅದನ್ನು ತಡೆಹಿಡಿಯಲಾಗಿತ್ತು. ಅಲ್ಲದೆ ರಾಷ್ಟ್ರೀಯ ಅಂಕಿಅಂಶಗಳ ಆಯೋಗದ ಸದಸ್ಯರು ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿದ್ದಾರೆ.

          ಇಂಗ್ಲಿಷ್ ದಿನಪತ್ರಿಕೆಯೊಂದು ಸಮೀಕ್ಷಾ ವರದಿ ಪ್ರಕಟಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಟ್ವಿಟರ್ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ರಾಹುಲ್ ಅವರ ಟ್ವೀಟ್‍ ವಾಗ್ದಾಳಿಯನ್ನು ಕಾಂಗ್ರೆಸ್‍ನ ಹಲವು ನಾಯಕರು ಸಮರ್ಥಿಸಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap