ಕಲಂ 370 ರದ್ದತಿ: ಪ್ರಜಾಪ್ರಭುತ್ವದ ಕರಾಳ ದಿನ : ಮೆಹಬೂಬಾ ಮುಫ್ತಿ.

ಶ್ರೀನಗರ:
   ಲೋಕಸಭೆಯಲ್ಲಿ ಕಲಂ 370 ಅನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಕ್ರಮವನ್ನು ಖಂಡಿಸಿ ಜಮ್ಮು -ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಕಲಂ 370ರ ರದ್ದು ಮಾಡಿರುವ ಕೇಮದ್ರದ ನಿರ್ಧಾರವನ್ನು ಖಂಡಿಸಿದ್ದು ಇವತ್ತು ಕಲಂ  ರದ್ದತಿಯಿಂದ ಒಂದು ರಾಜ್ಯದ ಜನರ ಸಂಪೂರ್ಣ ಸ್ವಾತಂತ್ರ್ಯ ಹಾಗು ಗೌರವಕ್ಕೆ ಧಕ್ಕೆಯಾಗಿದೆ ಎಂದಿದ್ದಾರೆ ಮತ್ತು ದೇಶ ಇವತ್ತಿನ ಈ ದಿನವನನ್ನು ಭಾರತೀಯ ಪ್ರಜಾಪ್ರಭುತ್ವದ ಕರಾಳ ದಿನ ಎಂದು ಅವರು ಬಣ್ಣಿಸಿದ್ದಾರೆ ಮತ್ತು ಈ ಒಂದು ನಿರ್ಧಾರದಿಂದ ಇಡೀ ಕಾಶ್ಮೀರ ಹೊತ್ತಿ ಉರಿಯಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
   ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವರು ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ ಮಂಡಿಸುತ್ತಿದ್ದಂತೆ ತಮ್ಮನ್ನು ಗೃಹಬಂಧನದಲ್ಲಿಡಲಾಗಿದ್ದ ನಿವಾಸದಿಂದಲೇ ಈ ಕುರಿತಂತೆ ಟ್ವೀಟ್ ಮಾಡಿರುವ ಮುಫ್ತಿ ಮೆಹಬೂಬಾ,ಇಂದು ಭಾರತೀಯ ಪ್ರಜಾಪ್ರಭುತ್ವದ ಕರಾಳ ದಿನ,ಈ ನಿರ್ಧಾರ ಅಂಗೀಕಾರವಾದರೆ ಕಾಶ್ಮೀರ ಹೊತ್ತಿ ಉರಿಯಲಿದೆ ಎಂದು ಎಚ್ಚರಿಸಿದ್ದರು.

   ಭಾರತೀಯ ಪ್ರಜಾಪ್ರಭುತ್ವದ ಕರಾಳ ದಿನ. ಕಾಶ್ಮೀರದ ಜನರಿಗೆ ಭಾರತೀಯರು ಕೊಟ್ಟ ಮಾತು ಭರವಸೆಯನ್ನು ಹಿಂಪಡೆದ ಕರಾಳ ದಿನವಿದು ಎಂದು ಹೇಳಿದ್ದಾರೆ. ಸಂವಿಧಾನದ 370ನೇ ವಿಧಿಯನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ನಿರ್ಧಾರವು ಏಕಪಕ್ಷೀಯ ಮತ್ತು ಸಂವಿಧಾನಬಾಹಿರ.ಈ ಒಂದು ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರದ ಜನತೆಯ ಪಾಲಿಗೆ ಭಾರತವು ಒಂದು ಆಕ್ರಮಣಕಾರಿ ಬಲವಾಗಿ ಮಾತ್ರ ಉಳಿದುಕೊಳ್ಳಲಿದೆ ಎಂದು ಟ್ವೀಟ್ ಮಾಡಿದ್ದಾರೆ.

   ಕಾಶ್ಮೀರದ ಲಕ್ಷಾಂತರ ಮಂದಿ ಭಾರತೀಯ ಸಂಸತ್ತು ಮತ್ತು ಸಂವಿಧಾನದ ಮೇಲೆ ಇಟ್ಟಿದ್ದ ಭರವಸೆ ಸಂಪೂರ್ಣ ನಾಶವಾಗಿದೆ ಎಂದು ಹೇಳಿದ್ದಾರೆ. ಕಲಂ 370 ರದ್ಧತಿಯ ಮೂಲಕ ಭಾರತ ವಿಶ್ವಸಂಸ್ಥೆಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತನ್ನು ಕೊಡದೆ ವಿಶ್ವಾಸ ದ್ರೋಹ ಮಾಡಿದೆ ಎಂದಿದ್ದಾರೆ . ಈಗಾಗಲೇ ನಮ್ಮನ್ನು ಗೃಹಬಂಧನದಲ್ಲಿರಿಸಲಾಗಿದೆ. ಕನಿಷ್ಠ ಮನೆಯ ಅತಿಥಿಗಳಿಗೂ ಪ್ರವೇಶ ಇಲ್ಲದಂತಾಗಿದೆ. ಇನ್ನೂ ಎಷ್ಟು ದಿನ ಹೀಗೆಯೇ ಮುಂದುವರೆಯುತ್ತದೆ ಎಂದು ಗೊತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap