ನವದೆಹಲಿ:
ಉಗ್ರರ ಮಾಡಿದ ದುಷ್ಕೃತ್ಯದಿಂದ ಭಾರತದಲ್ಲಿ 45 ಜನ ಯೋಧರು ಹುತಾತ್ಮರಾಗಿರುವುದಕ್ಕೆ ಪಾಕ್ ವಿರುದ್ಧ ಸಿಡಿದೆದ್ದಿರುವ ಭಾರತ ಸರ್ಕಾರ ಮತ್ತೊಂದು ಪ್ರಮುಖ ನಿರ್ಭಂದ ಹೇರುವ ತಯಾರಿಯಲ್ಲಿದೆ .
ಪಾಕಿಸ್ತಾನವನ್ನು ಅತ್ಯಾಪ್ತ ರಾಷ್ಟ್ರ ಸ್ಥಾನದಿಂದ ಕಿತ್ತೊಗೆದ ಮೇಲೆ ಉಭಯ ರಾಷ್ಟ್ರಗಳ ನಡುವೆ ಇದ್ದ ಹಲವು ರೀತಿ ವ್ಯವಹಾರ ಸಂಬಂಧಗಳು ಮುರಿದು ಬಿದ್ದಿದ್ದು,ಈಗ ಭಾರತೀಯ ಚಹಾ ಪೂರೈಕೆದಾರರ ಒಕ್ಕೂಟ ಪಾಕಿಸ್ತಾನಕ್ಕೆ ಚಹಾ ರಫ್ತು ನಿಲ್ಲಿಸಲು ನಾವು ಸಿದ್ಧರಿದ್ದೇವೆ ಎಂದು ಒಕ್ಕೂಟ ತಿಳಿಸಿದ್ದಾರೆ.
ನಾವು ಪಾಕಿಸ್ತಾನಕ್ಕೆ ಪ್ರತಿವರ್ಷ ಸರಿಸುಮಾರು 150 ಕೋಟಿ ರೂ. ಮೌಲ್ಯದಷ್ಟು ಚಹಾವನ್ನು ರಫ್ತು ಮಾಡುತ್ತಿದ್ದು. ಚಹಾ ಮಂಡಳಿಯ ವರದಿ ಪ್ರಕಾರ 2018ರಲ್ಲಿ ಸುಮಾರು 154.71 ಕೋಟಿ ರೂ. ಮೌಲ್ಯದ 1.58 ಕೋಟಿ ಕೆ.ಜಿ ಚಹಾವನ್ನು ಪಾಕಿಸ್ತಾನಕ್ಕೆ ಪೂರೈಕೆ ಮಾಡಲಾಗಿತ್ತು. ಆದರೆ ಪುಲ್ವಾಮ ಉಗ್ರರ ದಾಳಿಯಿಂದ ಉಭಯ ರಾಷ್ಟ್ರಗಳ ನಡುವೆ ಭಾರಿ ಬಿಕ್ಕಟ್ಟು ಸೃಷ್ಟಿಯಾಗಿದೆ, ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರನ್ನು ಬೆಂಬಲಿಸುತ್ತೇವೆ ಎಂದು ಚಹಾ ಪೂರೈಕೆದಾರರ ಒಕ್ಕೂಟ ಹೇಳಿದೆ. ಅಲ್ಲದೆ ನಮಗೆ ನಷ್ಟವಾದರೂ ಸರಿ ನಾವು ಮಾತ್ರ ಪಾಕಿಸ್ತಾನಕ್ಕೆ ಚಹಾ ರಫ್ತು ಮಾಡಲ್ಲ. ದೇಶ ಮೊದಲು ನಂತರ ವ್ಯಪಾರ ಎಂದು ಕೇಂದ್ರ ಸರ್ಕಾರಕ್ಕೆ ಸಾಥ್ ನೀಡಿದ್ದಾರೆ.
