ನವದೆಹಲಿ
ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೆ ಬಂದಿರುವ ಕಾಂಗ್ರೆಸ್ ನ ಸಲ್ಮಾನ್ ಖುರ್ಷಿದ್ ಇಂದು ಅಭಿನಂದನ್ ಅವರ ಬಗ್ಗೆ ಹೊಸ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ .
“ಅಭಿನಂದನ್ ಅವರು ನಮ್ಮ ಸರ್ಕಾರದ ಅವಧಿಯಲ್ಲಿಯೇ ಒಬ್ಬ ಪ್ರಬುದ್ಧ ಪೈಲಟ್ ಆಗಿದ್ದು” ಎನ್ನುವ ಮೂಲಕ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೊಸ ವಿವಾದವೊಂದಕ್ಕೆ ಮುನ್ನುಡಿ ಬರೆದಿದ್ದಾರೆ.
ಪ್ರಾಣ ಒತ್ತೆ ಇಡಲೂ ಸಿದ್ಧರಾಗಿ ದೇಶಕ್ಕಾಗಿ ಹೋರಾಡುವ ಸೈನಿಕರನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವ ನೀವು ಮನುಷ್ಯರಾ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.”ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಅಭಿನಂದನೆಗಳು. ಅವರು 2014 ರಲ್ಲಿ ವಿಂಗ್ ಕಮಾಂಡರ್ ಆಗಿ, ಯುಪಿಎ ಅವಧಿಯಲ್ಲಿ ಪ್ರಬುದ್ಧ ಪೈಲಟ್ ಆಗಿದ್ದು ಹೆಮ್ಮೆಯ ವಿಷಯ” ಎಂದು ಖುರ್ಷಿದ್ ಹೇಳಿದ್ದರು.