ನೆಲಮಂಗಲ
ಖಿನ್ನತೆಗೆ ಒಳಗಾಗಿದ್ದ ಬಿಎ ನರ್ಸಿಂಗ್ ವಿದ್ಯಾರ್ಥಿನಿ ಕಾಲೇಜು ಕಟ್ಟಡದ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ವಿದ್ಯೋದಯ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ. ಕೇರಳ ಮೂಲದ ಅತುಲ್ಯ (19) ಮೃತ ವಿದ್ಯಾರ್ಥಿನಿ. ಕಳೆದ ಒಂದುವರೆ ತಿಂಗಳ ಹಿಂದಷ್ಟೇ ಯುವತಿ ನರ್ಸಿಂಗ್ ಸೇರಿಕೊಂಡಿದ್ದಳು.
ಒಂಟಿತನ ಕಾಡುತ್ತಿದ್ದ ಬಗ್ಗೆ ತನ್ನ ತಾಯಿಗೆ ಅತುಲ್ಯ ಕರೆ ಮಾಡಿದ್ದಾಳೆ. ಫೋನ್ನಲ್ಲಿ ಮಾತನಾಡುವ ನೆಪದಲ್ಲಿ ಕಾಲೇಜು ಕಟ್ಟಡ ಏರಿದ್ದಾಳೆ. ಬಳಿಕ ಅಲ್ಲಿಂದ ಜಿಗಿದಿದ್ದು, ಗಂಭೀರ ಗಾಯಗೊಂಡಿದ್ದಳು. 8ನೇ ಮೈಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾಳೆ. ಘಟನೆ ಸಂಬಂಧ ಸೋಲದೇವಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.