100 ಹಾಸಿಗೆಯುಳ್ಳ ಸುಸಜ್ಜಿತ ತಾಲ್ಲೂಕು ಆಸ್ಪತ್ರೆ ನಿರ್ಮಾಣ , ಶಾಸಕ ಎನ್. ಶ್ರೀನಿವಾಸ್ 

ದಾಬಸ್ ಪೇಟೆ :-

     ಕಳೆದ ಬಜೆಟ್ ನಲ್ಲಿ ಘೋಷಣೆಯಾದಂತೆ ತಾಲೂಕಿನಲ್ಲಿ 100 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಗುದ್ದಲಿ ಪೂಜೆಯನ್ನು  ಒಂದು ತಿಂಗಳ ಒಳಗಾಗಿ ಶ್ರೀ ಪವಾಡ ಬಸವಣ್ಣ ದೇವರ ಮಠದ  ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ನೆರವೇರಿಸಲಾಗುವುದು ಎಂದು ಶಾಸಕ ಎನ್. ಶ್ರೀನಿವಾಸ್ ಹೇಳಿಕೆ ನೀಡಿದರು.

    ತಾಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ಆಯೋಜಿಸಿದ್ದ ಈಶ್ವರ ಸ್ವರೂಪಿ  ಮುನೇಶ್ವರ ಸ್ವಾಮಿ, ಹಾಗೂ ಚೌಡೇಶ್ವರಿ ದೇವಿಯ 18ನೇ ವರ್ಷದ  ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದರು.

    ನಾನು ಗ್ರಾಮಗಳಿಗೆ  ಪ್ರವಾಸ ಹೋದ ಸಂದರ್ಭದಲ್ಲಿ ತಾಲೂಕು ಆಸ್ಪತ್ರೆ ಬೇಕು ಎಂಬ ಬೇಡಿಕೆಯನ್ನು  ಕ್ಷೇತ್ರದ ಜನತೆ ಇಟ್ಟಿದ್ದರು,ನಾನು ಹೋರಾಟವನ್ನು ಮಾಡಿ  ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಬಳಿ ಮನವಿಯನ್ನು ಮಾಡಿದ್ದೆ, ಅದರಂತೆ ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ ಅದರ ಟೆಂಡರ್ ಸಹ ಮುಗಿದಿದ್ದು ತಾಲೂಕಿನ ಜನರಬಹುದಿನದ ಆಶಯದಂತೆ  ಸೋಲೂರು ಸೇರಿದಂತೆ  3 ಹೋಬಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೇಂದ್ರ ಸ್ಥಾನದಲ್ಲಿ 2ಎಕರೆ 30 ಗುಂಟೆ ಜಾಗವನ್ನು  ಆಸ್ಪತ್ರೆ ನಿರ್ಮಾಣಕ್ಕಾಗಿ ಮೀಸಲಿರಿಸಿ  32.5 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಯುಳ್ಳ ಹೈಟೆಕ್ ತಾಲ್ಲೂಕು ಆಸ್ಪತ್ರೆ ನಿರ್ಮಾಣವಾಗಲಿದೆ

     ತಾಲೂಕಿನ ಅಭಿವೃದ್ಧಿಯನ್ನು  ಜನತೆಯ ರೈತರ ಹಿತವನ್ನು ಬಯಸುವಂತಹ ಪ್ರಗತಿಯ ಪೂರಕವಾಗಿ ಚಿಂತಿಸುವಂತಹ ಶ್ರೀ ಪವಾಡ ಬಸವಣ್ಣ ದೇವರ ಮಠದ  ಪರಮಪೂಜ್ಯರಾದ ಸಿದ್ದಲಿಂಗ ಸ್ವಾಮೀಜಿಗಳ ಅಮೃತ ಹಸ್ತದಿಂದ  ಇನ್ನು 1 ತಿಂಗಳ ಒಳಗಾಗಿ ಗುದ್ದಲಿ ಪೂಜೆಯನ್ನು ನೆರವೇರಿಸಲಾಗುವುದು. ಎರಡು ವರ್ಷಗಳ ಒಳಗಾಗಿ  ಕಾಮಗಾರಿಯನ್ನು ಪೂರ್ಣಗೊಳಿಸಿ  ಉದ್ಘಾಟನೆ ಮಾಡುವ ಕೆಲಸವನ್ನು ಮಾಡುತ್ತೇನೆ ಎಂದರು.

     ನನ್ನ ಕೆಲಸವನ್ನು ನೋಡಿ  ಕೆಲವರಿಗೆ ಹೊಟ್ಟೆಕಿಚ್ಚು, ಹೊಟ್ಟೆ ಉರಿ ಬಂದಿದೆ, ತಾಲೂಕು ಆಸ್ಪತ್ರೆ ನಿರ್ಮಾಣವು ನನ್ನದೇ ಅನ್ನುತ್ತಾರೆ,  ತ್ಯಾಮಗೊಂಡ್ಲು ರಸ್ತೆಯು ಸಹ ನನ್ನದೇ ಎನ್ನುತ್ತಾರೆ, ಇದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ, ಹಗಲು ರಾತ್ರಿ ಕಷ್ಟಪಡುತ್ತಿದ್ದೇನೆ ಕ್ಷೇತ್ರದ ಜನರ ಋಣವನ್ನು ತೀರಿಸುತ್ತಿದ್ದೇನೆ ಎಂದರು,

    ಈ ಸಂದರ್ಭದಲ್ಲಿ ಶ್ರೀ ಪವಾಡ ಬಸವಣ್ಣ ದೇವರ ಮಠದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ.  ಬಸವನಹಳ್ಳಿಯ ಶಿವಾನಂದ ಆಶ್ರಮದ ಶ್ರೀ ರಮಣಾನಂದನಾಥ ಸ್ವಾಮೀಜಿ. ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣಗೌಡ. ನಗರಸಭೆ ಅಧ್ಯಕ್ಷ ಗಣೇಶ್. ಕಸಾಪ ಅಧ್ಯಕ್ಷ ಪ್ರಕಾಶ್ ಮೂರ್ತಿ.ಹೊಸಪಾಳ್ಯ ಗ್ರಾಮದ ವಿಜಯ್. ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಹುಲ್ ಗೌಡ, ಅಂದಾನಪ್ಪ.  ಕಾಂಗ್ರೆಸ್ ಮುಖಂಡರಾದ ಚಿಕ್ಕ ಹನುಮೇಗೌಡ. ಸಿಎಂ ಗೌಡ. ಹನುಮಂತರಾಜು. ಟಿಎಪಿಸಿಎಂಎಸ್ ಅಧ್ಯಕ್ಷ ನರಸಿಂಹಮೂರ್ತಿ. ಶ್ರೀನಿವಾಸಪುರ ಪಂಚಾಯತಿ ಅಧ್ಯಕ್ಷ ನಟರಾಜು. ಹಂಚಿಪುರ ಹಾಲಿನ ಡೈರಿ ಅಧ್ಯಕ್ಷ ಭೈರೇಗೌಡ. ಹೊಸ ಪಾಳ್ಯ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು

Recent Articles

spot_img

Related Stories

Share via
Copy link