ದುರಂತಗಳ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ರಾತ್ರಿ ಬಸ್ಸುಗಳಿಗೆ ಫುಲ್‌ ಸೇಫ್ಟಿ ವ್ಯವಸ್ಥೆ!

ಬೆಂಗಳೂರು

    ಇತ್ತೀಚೆಗೆ ನೈಟ್ ಸರ್ವಿಸ್ ಖಾಸಗಿ ಬಸ್​ಗಳಲ್ಲಿ  ಅಗ್ನಿ ದುರಂತಗಳು  ಸಂಭವಿಸಿ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅಲರ್ಟ್ ಆಗಿರುವ ಕೆಎಸ್ಆರ್​​ಟಿಸಿ  ನಿಗಮ, ಅತ್ಯಾಧುನಿಕ ಅಡಾಸ್ ಸಿಸ್ಟಮ್ ಅಳವಡಿಕೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಕೆಎಸ್ಆರ್​ಟಿಸಿ ಅಂಬಾರಿ ಉತ್ಸವ  ಮತ್ತು ಅಂಬಾರಿ 2.0 ಬಸ್​ಗಳಲ್ಲಿ ಅತ್ಯಾಧುನಿಕ ಮುಂಜಾಗ್ರತಾ ಕ್ರಮಗಳನ್ನು  ತೆಗೆದುಕೊಳ್ಳಲು ಮುಂದಾಗಿದೆ.

    ಮೊದಲಿಗೆ ಅಂಬಾರಿ ಉತ್ಸವ ಎಸಿ ಸ್ಲೀಪರ್ ಬಸ್​ಗಳಲ್ಲಿ ಅಳವಡಿಸಿರುವ ಮುಂಜಾಗ್ರತಾ ಕ್ರಮಗಳನ್ನು ನೋಡುವುದಾದರೆ, ಡ್ರೈವರ್ ಸೀಟ್ ಬಳಿ ಡ್ಯಾಶ್ ಕ್ಯಾಮ್ ಅಳವಡಿಸಲಾಗಿದೆ. ಈ ಕ್ಯಾಮೆರಾದಿಂದ ಬಸ್ ಆಕ್ಸಿಡೆಂಟ್​ಗೆ ಕಾರಣ ಗೊತ್ತಾಗಲಿದೆ. ಏನಾದರೂ ಬಸ್​​ನಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ, ಪ್ರಯಾಣಿಕರನ್ನು ಅಲರ್ಟ್ ಮಾಡಲು ಡ್ರೈವರ್ ಮುಂಭಾಗದಲ್ಲಿ ಅನೌನ್ಸರ್ ಇಡಲಾಗಿದೆ. ಅಂದರೆ ಫೈರ್ ಡಿಟೆಕ್ಷನ್ ಆ್ಯಂಡ್​ ಸಪ್ರೇಷನ್ ಸಿಸ್ಟಮ್ (FDSS). ಇಂಜಿನ್ ಕಂಪಾರ್ಟ್ಮೆಂಟ್​​ನಲ್ಲಿ ಬೆಂಕಿ ಕಾಣಿಸಿಕೊಂಡರೆ ಇಂಜಿನ್​ ಕಂಪಾರ್ಟ್ಮೆಂಟ್​ನಲ್ಲಿ ಆಟೋಮ್ಯಾಟಿಕ್ ಆಗಿ 15 ನಾಜಲ್​ಗಳಿಂದ ಫೋಮ್ ಸ್ಪ್ರೇ ಆಗುತ್ತದೆ.

   ಒಂದು ವೇಳೆ ಸ್ಪ್ರೇ ಆಗಲಿಲ್ಲ ಅಂದರೆ ಡ್ರೈವರ್ ಮುಂಭಾಗದ ಡಿಸ್ಪ್ಲೇಯಲ್ಲಿರುವ ಬಟನ್ ಪ್ರೆಸ್ ಮಾಡಿದರೆ, ನಾಜಲ್​ಗಳ ಮೂಲಕ ಅಗ್ನಿ ಅವಘಡ ತಪ್ಪಲಿದೆ. ಇದಕ್ಕಾಗಿ ಬಸ್ ಹಿಂಭಾಗದಲ್ಲಿ 4 ಕೆಜಿಯ ಫೋಮ್ ಸಿಲಿಂಡರ್ ಅಳವಡಿಸಲಾಗಿದೆ. ಬಸ್​ನಲ್ಲಿ ಏನಾದರೂ ಬೆಂಕಿ ಕಾಣಿಸಿಕೊಂಡರೆ ಫ್ರಂಟ್ ಗ್ಲಾಸ್ ಒಡೆದು ತಪ್ಪಿಸಿಕೊಳ್ಳಲು ಡ್ರೈವರ್ ಸೀಟ್ ಹಿಂಭಾಗದಲ್ಲಿ ದೊಡ್ಡದಾದ ಹ್ಯಾಮರ್ ಇಡಲಾಗಿದೆ. ತಪ್ಪಿಸಿಕೊಳ್ಳಲು ಪ್ರತಿ ಬರ್ತ್ ಸೀಟ್​ನಲ್ಲೂ ಕಿಟಕಿ ಗ್ಲಾಸ್ ಒಡೆಯಲು ಹ್ಯಾಮರ್ ಇಡಲಾಗಿದೆ. ಬಸ್​ನಲ್ಲಿ ಏನಾದರೂ ಸಮಸ್ಯೆ ಕಾಣಿಸಿಕೊಂಡಾಗ ಡ್ರೈವರ್ ಮುಂಭಾಗದಲ್ಲಿ ಪ್ಯಾನಿಕ್ ಬಟನ್ ಅನ್ನು ಕೂಡ ಅಳವಡಿಸಿದೆ. ಅದನ್ನು ಡ್ರೈವರ್ ಪ್ರೆಸ್ ಮಾಡಿದಾಗ ಶಬ್ದ ಉಂಟಾಗಿ ಪ್ರಯಾಣಿಕರಿಗೆ ಎಚ್ಚರಿಕೆ ಸಂದೇಶ ರವಾನೆ ಆಗುತ್ತದೆ. ಬಸ್ ಒಳಗೆ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 4 ಕೆಜಿಯ ಎರಡು ಫೈರ್ ಎಸ್ಟಿಂಗ್ವಿಷರ್ ಅಳವಡಿಸಲಾಗಿದೆ.

   ಎಮರ್ಜೆನ್ಸಿ ಎಕ್ಸಿಟ್ ಡೋರ್ ಅನ್ನು ವಾಹನದ ಬಲಭಾಗದ ಮೂರನೇ ಬರ್ತ್​​ನಲ್ಲಿ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಅಗ್ನಿ ಅವಘಡದ ವೇಳೆ ಪ್ರಯಾಣಿಕರು ಈ ಡೋರ್ ಮೂಲಕ ಎಕ್ಸಿಟ್ ಆಗಬಹುದು. ಈ ಬರ್ತ್ ಅನ್ನು ಯಾರಿಗೂ ಬುಕ್ ಮಾಡುವುದಿಲ್ಲ. ಇದು ಯಾವಾಗಲೂ ಖಾಲಿಯಾಗಿರಲಿದೆ. ಬಸ್ ಒಳಭಾಗದಲ್ಲಿ ಎರಡು ಸೆಲೂನ್ ಕ್ಯಾಮೆರಾ ಅಳವಡಿಸಲಾಗಿದೆ.

   ದೇಶದಲ್ಲಿ ಇದೇ ಮೊದಲ ಬಾರಿಗೆ ಕೆಎಸ್ಆರ್​​ಟಿಸಿ ನಿಗಮದ ಬಸ್​ಗಳಲ್ಲಿ ಅತ್ಯಾಧುನಿಕ ಅಡಾಸ್ ಸಿಸ್ಟಮ್ ಅನ್ನು ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಅಳವಡಿಸಲು ಮುಂದಾಗಿದೆ. ಈ ಅಡಾಸ್ ಸಿಸ್ಟಮ್ ಡ್ರೈವಿಂಗ್ ವೇಳೆ, ಫೋನ್ ಬಳಕೆ ಮಾಡಿದರೆ, ನಿದ್ರೆಗೆ ಜಾರಿದರೆ, ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡರೆ ಕೋಲಿಜಿಯನ್ ವಾರ್ನಿಂಗ್ ನೀಡುತ್ತದೆ. ಈ ವೇಳೆ ಮೊದಲಿಗೆ ಬೀಪ್ ಸೌಂಡ್ ನೀಡುತ್ತದೆ. ನಂತರ ಕ್ರಿಟಿಕಲ್ ವಾರ್ನಿಂಗ್ ನೀಡಿ, ವಾಹನದ ವೇಗ ಮಿತಿ ಕಡಿಮೆ ಮಾಡಿ ಆಕ್ಸಿಡೆಂಟ್ ತಡೆಗಟ್ಟಲು ಸಹಾಯ ಮಾಡುತ್ತದೆ. ಡ್ರೈವರ್ ಡ್ರೈವಿಂಗ್ ಮಾಡುವ ವೇಳೆ ಕುಡಿದು ಬಂದಿದ್ದರೆ ವಾಹನ ಸ್ಟಾರ್ಟ್ ಆಗುವುದಿಲ್ಲ. 

   ಇತ್ತ ಐರಾವತ ಬಸ್​ಗಳಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಅಂತ ನೋಡುವುದಾದರೆ, ಪ್ರಯಾಣಿಕರ ಸೀಟ್ ಬಳಿ 30 ಸ್ಪ್ರಿಂಕ್ಲರ್ ನಾಜಲ್ ಅಳವಡಿಸಿದ್ದು, ಅಗ್ನಿ ಅವಘಡ ಸಂಭವಿಸಿದರೆ ಸ್ವಯಂಚಾಲಿತವಾಗಿ ನೀರು ಸರಬರಾಜು ಆಗುತ್ತದೆ. ಇದಕ್ಕಾಗಿ ಬಸ್ ಲಗೇಜ್​​ ಕಂಪಾರ್ಟ್‌ಮೆಂಟ್ ಬಳಿ 170 ಲೀಟರ್ ಕೆಪಾಸಿಟಿಯ ಎರಡು ಸ್ಟೈನ್‌ಲೆಸ್ ಸ್ಟೀಲ್ ಟ್ಯಾಂಕರ್​ಗಳನ್ನು ಅಳವಡಿಸಲಾಗಿದೆ.

  ಬಸ್ ಬಲಭಾಗದ ಹಿಂಬದಿಯಲ್ಲಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ಅಳವಡಿಸಿದ್ದು, ತುರ್ತು ಸಂದರ್ಭದಲ್ಲಿ ಸ್ಟೀಲ್ ಲ್ಯಾಡರ್ ಅಳವಡಿಸಲಾಗಿದೆ. ಇದರಿಂದ ಪ್ರಯಾಣಿಕರು ಸೇಫ್ ಆಗಿ ಬಸ್​ನಿಂದ ಕೆಳಗೆ ಇಳಿಯಬಹುದು ಎಂದು ಕೆಎಸ್​​ಆರ್​​ಟಿಸಿ ಡಿ.ಸಿ ನಾಗರಾಜ್ ಮೂರ್ತಿ ಹೇಳುತ್ತಾರೆ.

Recent Articles

spot_img

Related Stories

Share via
Copy link