ಮುಂಬೈ:
ರಾಮ್ ಗೋಪಾಲ್ ವರ್ಮಾ ಮಾಡಿಕೊಳ್ಳುವ ವಿವಾದಗಳು ಒಂದೆರಡಲ್ಲ. ಅವರು ನೀಡುವ ಹೇಳಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕುತ್ತದೆ. ಚೆಕ್ಬೌನ್ಸ್ ಕೇಸ್ನಲ್ಲಿ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಅವರಿಗೆ ಬಂಧನ ಭೀತಿ ಇದೆ. ಆದರೆ, ಅವರು ಮಾತ್ರ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ನಟಿ ಮಣಿಯರ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆ. ಈಗ ಆರ್ಜಿವಿ ನೀಡಿದ ಹೇಳಿಕೆ ಒಂದು ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅವರ ಹೇಳಿಕೆಗೆ ಅನೇಕರು ಟೀಕೆ ಹೊರಹಾಕಿದ್ದಾರೆ.
ಯುವ ಹೀರೋಯಿನ್ಗಳನ್ನು ಆರ್ಜಿವಿ ಹೆಚ್ಚೆಚ್ಚು ಆಕರ್ಷಿಸಿಕೊಳ್ಳುತ್ತಾರೆ. ಅವರ ಜೊತೆ ಲಲ್ಲೆ ಹೊಡೆಯುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಅವಕಾಶ ಸಿಗಬಹುದು ಎಂಬುದು ಯುವ ಹೀರೋಯಿನ್ಗಳ ಆಲೋಚನೆ ಇದ್ದರೂ ಇರಬಹುದು. ಹೀಗಾಗಿ, ಕೆಲ ನಟಿಯರು ಆರ್ಜಿವಿ ಜೊತೆ ಫಿಲ್ಟರ್ ಇಲ್ಲದೆ ಮಾತನಾಡುತ್ತಾರೆ. ಆರ್ಜಿವಿ ಏನೇ ಹೇಳಿದರೂ ಮುಜುಗರ ಮಾಡಿಕೊಳ್ಳದೆ ನಗುತ್ತಾರೆ.
