ನಿಟ್ಟೂರು : ರಸ್ತೆ ಅಗಲೀಕರಣ : ಗೋಡೆ ನಿರ್ಮಾಣ ನಿಲ್ಲಲಿ

 ನಿಟ್ಟೂರು : 

     ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಕೇಂದ್ರವು ತಾಲ್ಲೂಕಿಗೆ ಹೃದಯಭಾಗದಂತಿದ್ದು, ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡೆತಡೆಗಳು ಎದುರಾಗಿದ್ದು, ಕಂಟಕಗಳು ಸಂಭವಿಸುವ ಮುನ್ನವೆ ವ್ಯವಸ್ಥಿತವಾಗಿ ರಸ್ತೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದಿವೆ.

ಸಾರ್ವಜನಿಕರ ಆಕ್ರೋಶ:

     ನಿಟ್ಟೂರಿನ ಪ್ರಮುಖ ಸರ್ಕಲ್‍ನಲ್ಲಿ ಈಗಾಗಲೇ ಬ್ರಿಡ್ಜ್‍ವೊಂದನ್ನು ನಿರ್ಮಿಸುತ್ತಿದ್ದು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಮುಂದೆಯೂ ಬ್ರಿಡ್ಜ್ ನಿರ್ಮಾಣವಾಗಲಿ ಆಗದಿದ್ದರೆ ರಸ್ತೆ ಅಗಲೀಕರಣ ಕಾಮಗಾರಿ ವಿರುದ್ಧ ಹೋರಾಟ ನಡೆಸಲಾಗುವುದೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನತೆ ಬೀದಿಪಾಲು :

     ರಸ್ತೆ ಅಗಲೀಕರಣದಿಂದಾಗಿ ಬಡ ವ್ಯಾಪಾರಿಗಳು, ಜನತೆ ಬೀದಿಪಾಲಾಗಿ ಹೋಗಿದ್ದಾರೆ. ರೈತರು ತೋಟಗಳಿಗೆ ತೆರಳಲು ರಸ್ತೆ ಉದ್ದಕ್ಕೂ ನಿರ್ಮಿಸಿರುವ ಗೋಡೆಗಳು ಸಂಚಾರಕ್ಕೆ ಎಡವಟ್ಟು ತಂದೊಡ್ಡಿವೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಸುಮಾರು ದೂರ ಸುತ್ತುವರಿದು ಹೋಗಬೇಕಾದ ಗೋಳು ಅನುಭವಿಸಬೇಕೆಂದು ರೈತವರ್ಗ ರೊಚ್ಚಿಗೆದ್ದಿದ್ದಾರೆ.

ನಿಜ ಚಿತ್ರಣ ಯಾರಿಗೂ ಗೊತ್ತಿಲ್ಲ :

      ರಸ್ತೆ ಕಾಮಗಾರಿಯಲ್ಲಿ ಹಲವಾರು ಸಮಸ್ಯೆಗಳು ತಲೆದೋರಿದ್ದು ವಯಸ್ಕರು, ಮಕ್ಕಳು, ಮಹಿಳೆಯರು ಪರದಾಡುತ್ತಿದ್ದಾರೆ. ನಿಟ್ಟೂರು ಮಾರ್ಗದ ರಸ್ತೆ ಅಗಲೀಕರಣದ ನಿಜವಾದ ಚಿತ್ರಣ ಯಾರಿಗೂ ಗೊತ್ತಿಲ್ಲವೆಂದು ಸ್ಥಳೀಯರು ಕಿಡಿಕಾರಿದ್ದಾರೆ. ಸಮಸ್ಯೆಗಳನ್ನು ತಪ್ಪಿಸಲು ಸಂಬಂಧಿಸಿದವರು ತಕ್ಷಣ ಗಮನಹರಿಸಬೇಕೇಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link