ಬೆಂಗಳೂರು:
ಒಳಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆಯುತ್ತಿದೆ. ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿದೆ. ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಆಗ್ರಹಿಸಿ ಹರಿಹರದಿಂದ ಪ್ರಾರಂಭವಾದ ಕ್ರಾಂತಿಕಾರಿ ಪಾದಯಾತ್ರೆಯು ಶುಕ್ರವಾರ ಬೆಂಗಳೂರು ತಲುಪಿದೆ, ಇಂದಿಗೆ ಐದನೇ ದಿನ, 101 ಪರಿಶಿಷ್ಟ ಜಾತಿಗಳಿವೆ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ ಉದ್ಯೋಗದ ಸಂದರ್ಭ ಒಳಮೀಸಲಾತಿ ಜಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಿನ್ನೆ ಸಚಿವರ ಮಹತ್ವದ ಸಭೆ ನಡೆಯಿತು.
ಆದ್ರೂ ಮಾದಿಗ ಸಮುದಾಯಗಳಿಗೆ ಮೋಸವಾಗುತ್ತದೆ , ಒಳಮೀಸಲಾತಿ ಜಾರಿಗೊಳಿಸುವವರೆಗೂ, ಹಾಗೆ ಮುಖ್ಯವಾಗಿ ರಾಜ್ಯಪಾಲರ ಸಹಿ ಮಾಡುವರೆಗೂ ಸರ್ಕಾರದ ವಿರುದ್ಧ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾದಿಗ ಸಮುದಾಯದವರು ಆಗಮಿಸಿ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ, ಸತ್ಯಾಗ್ರಹ ಏಪ್ರಿಲ್ 5ರ ತನಕ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮುಂದುವರೆದ ಎಂದು ಮಾದಿಗ ಸಮುದಾಯ ಒಕ್ಕೂಟದ ಅಧ್ಯಕ್ಷ ಡಾ. ಬಿ.ಆರ್. ಮುನಿರಾಜು ತಿಳಿಸಿದರು.
ಪ್ರತಿಭಟನೆಯಲ್ಲಿ ಮಾದಿಗ ಸಮುದಾಯ ಒಕ್ಕೂಟದ ನಾಯಕ ಡಾ. ಬಿ.ಆರ್. ಮುನಿರಾಜು, ಚನ್ನಕೇಶವ, ಸುರೇಶ್, ತಿಪ್ಪೇಶ್, ಮಾಲ್ಲಿಯಪ್ಪ , ರಘು ಸೇರಿದಂತೆ ಹಲವಾರು ಗಣ್ಯರು ಭಾಗಿ.
