ನವದೆಹಲಿ:
ಜಮ್ಮು ಕಾಶ್ಮೀರದಲ್ಲಿ ತಮ್ಮ ಪಕ್ಷದ ಗೆದ್ದು ಅಧಿಕಾರಕ್ಕೇರಲು ಹೊರಟಿರುವಾಗ ಒಮರ್ ಅಬ್ದುಲ್ಲಾ ಹಳೆಯ ಮಿತ್ರ ಕಾಂಗ್ರೆಸ್ ಗೆ ಡಿಚ್ಚಿ ಕೊಟ್ಟು ಬಿಜೆಪಿಗೆ ಜೈ ಎನ್ನುವ ಲಕ್ಷಣ ಕಾಣುತ್ತಿದೆ. ಒಮರ್ ಅಬ್ದುಲ್ಲಾ ಜಮ್ಮು ಕಾಶ್ಮೀರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.ಆದರೆ ನ್ಯಾಷನಲ್ ಕಾನ್ಫರೆನ್ಸ್ ಗೆದ್ದಿರುವುದು 42 ಸ್ಥಾನಗಳು. ಇನ್ನೊಂದು ಪಕ್ಷದ ಬೆಂಬಲದೊಂದಿಗೇ ಒಮರ್ ಅಬ್ದುಲ್ಲಾ ಸರ್ಕಾರ ನಡೆಸಬೇಕಿದೆ. ಹೀಗಿರುವಾಗ ಕಾಂಗ್ರೆಸ್ ಜೊತೆಗೇ ಇರುತ್ತಾರಾ ಅಥವಾ ಕಾಂಗ್ರೆಸ್ ಗೆ ಡಿಚ್ಚಿ ಕೊಟ್ಟು ಬಿಜೆಪಿ ಕೈ ಹಿಡಿಯುತ್ತಾರಾ ಎಂಬ ಅನುಮಾನ ಮೂಡಿದೆ.
ಇದಕ್ಕೆ ಕಾರಣವೂ ಇದೆ. ಜಮ್ಮು ಕಾಶ್ಮೀರದಲ್ಲಿ ತಮ್ಮ ಪಕ್ಷದ ಗೆದ್ದ ಬಳಿಕ ಒಮರ್ ಅಬ್ದುಲ್ಲಾ ನಿನ್ನೆಯಿಂದ ಮೋದಿ ಸರ್ಕಾರವನ್ನು ಕೊಂಡಾಡುತ್ತಿದ್ದಾರೆ. ಮೋದಿ ಸರ್ಕಾರ ಈ ಹಿಂದೆ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಅದನ್ನು ಬಿಟ್ಟು ನಾವು ಕೇಂದ್ರದ ಜೊತೆಗೇ ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ.
ಹೀಗಾಗಿ ಒಮರ್ ಅಬ್ದುಲ್ಲಾ 29 ಸ್ಥಾನ ಗೆದ್ದಿರುವ ಬಿಜೆಪಿ ಬೆಂಬಲ ಪಡೆದರೂ ಅಚ್ಚರಿಯಿಲ್ಲ. ಒಂದು ವೇಳೆ ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಒಮರ್ ಅಬ್ದುಲ್ಲಾ ಸರ್ಕಾರ ರಚಿಸಿದರೆ ಕಾಂಗ್ರೆಸ್ ಗೆ ಅದು ದೊಡ್ಡ ಹೊಡೆತವಾಗಲಿದೆ. ಈಗಾಗಲೇ ಹರ್ಯಾಣ ಕೈತಪ್ಪಿದ್ದು, ಇನ್ನೀಗ ಜಮ್ಮು ಕಾಶ್ಮೀರವನ್ನೂ ಕಳೆದುಕೊಳ್ಳಬೇಕಾಗಬಹುದು.