ಜಮೀರ್‌ ಅಹಮದ್‌ ರಾಜೀನಾಮೆಗೆ ವಿಪಕ್ಷಗಳ ಆಗ್ರಹ….!

ಬೆಳಗಾವಿ: 

  ತೆಲಂಗಾಣ ಚುನಾವಣೆ ಸಮಯದಲ್ಲಿ ಜಮೀರ್‌ ಅಹಮದ್ ವಿಧಾನಸಭೆಯ ಸ್ಪೀಕರ್ ವಿಚಾರವಾಗಿ ನೀಡಿದ್ದ ಹೇಳಿಕೆ ವಿಧಾನ ಪರಿಷತ್ ಕಲಾಪದಲ್ಲಿ ದೊಡ್ಡ ಗದ್ದಲಕ್ಕೆ ಕಾರಣವಾಯಿತು. ಇದರಿಂದ 2 ಬಾರಿ ಸದನ ಮುಂದೂಡಲಾಯಿತು.

    ಪ್ರತಿಪಕ್ಷಗಳು ಸಚಿವರ ಉತ್ತರವನ್ನು ಕೇಳಲು ನಿರಾಕರಿಸಿದ್ದರಿಂದ ಬುಧವಾರ ಪರಿಷತ್ ನಲ್ಲಿ ಗದ್ದಲ ಏರ್ಪಟ್ಟಿತು, ಜಮೀರ್  ರಾಜೀನಾಮೆಗೆ ಬಿಜೆಪಿ ಒತ್ತಾಯಿಸಿತು. ರಾಜ್ಯ ಸರ್ಕಾರ ಜಮೀರ್ ಅವರನ್ನು ಸಮರ್ಥಿಸಿಕೊಂಡರೆ ಮತ್ತು ಪ್ರಕರಣದ ತನಿಖೆಗೆ ಸದನ ಸಮಿತಿ ರಚಿಸುವ ಬೇಡಿಕೆಗೆ ಬಗ್ಗಲು ನಿರಾಕರಿಸಿದರೆ, ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

    ಇತ್ತೀಚೆಗಷ್ಟೇ ತೆಲಂಗಾಣದಲ್ಲಿ ಕಾಂಗ್ರೆಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಜಮೀರ್, ಕರ್ನಾಟಕದ ಇತಿಹಾಸದಲ್ಲಿ ಮುಸ್ಲಿಮರನ್ನು ವಿಧಾನಸಭಾಧ್ಯಕ್ಷರನ್ನಾಗಿ ಮಾಡಿಲ್ಲ ಎಂದು ಹೇಳಿದ್ದರು. ”ಯುಟಿ ಖಾದರ್ ಅವರನ್ನು ಸ್ಪೀಕರ್ ಮಾಡಲಾಗಿದೆ. ಈಗ ಸದನದಲ್ಲಿ ಬಿಜೆಪಿಯ ಹಿರಿಯ ನಾಯಕರೆಲ್ಲ ನಮಸ್ಕಾರ ಹೇಳಬೇಕು. ಇದೆಲ್ಲವೂ ಕಾಂಗ್ರೆಸ್‌ನಿಂದ ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

    ಪ್ರಶ್ನೋತ್ತರ ವೇಳೆಯಲ್ಲಿ ಜಮೀರ್ ಪ್ರಶ್ನೆಯೊಂದಕ್ಕೆ ಉತ್ತರಿಸಲು ನಿಂತಾಗ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾದರು ಮತ್ತು ಅವರನ್ನು ಸಂಪುಟದಿಂದ ಹೊರಹಾಕುವಂತೆ ಒತ್ತಾಯಿಸಿದರು. ಸ್ಪೀಕರ್ ಹುದ್ದೆಯನ್ನು ಕೋಮುವಾದಗೊಳಿಸುವುದು ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ಬಿಜೆಪಿ ಎಂಸಿಎಲ್ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು. ಹಾಗಾಗಿ ಸಚಿವರು ತಾವಾಗಿಯೇ ರಾಜೀನಾಮೆ ನೀಡಬೇಕು ಅಥವಾ ಸರ್ಕಾರ ಅವರನ್ನು ಸಂಪುಟದಿಂದ ಹೊರಹಾಕಬೇಕು ಎಂದು ಅವರು ಒತ್ತಾಯಿಸಿದರು.

    ಈ ವಿಷಯ ಪರಿಷತ್ತಿಗೆ ಸಂಬಂಧಿಸದ ಕಾರಣ ಸದನದಲ್ಲಿ ಪ್ರಸ್ತಾಪಿಸಲು ಸಾಧ್ಯವಿಲ್ಲ ಎಂದು ಸಭಾನಾಯಕ ಎನ್.ಎಸ್.ಬೋಸರಾಜು ಹೇಳಿದರು. ಹೊರಟ್ಟಿ ಕೂಡ ಸರ್ಕಾರದ ನಿಲುವಿಗೆ ಸಹಮತ ವ್ಯಕ್ತಪಡಿಸಿದರು. ಸರಕಾರ ಸಚಿವರಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಸಭಾಪತಿ ಸದನವನ್ನು ಕೆಲಕಾಲ ಮುಂದೂಡಿದರು.

    ಹೊರಟ್ಟಿಯವರು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರೊಂದಿಗೆ  ಸಂಧಾನ ನಡೆಸಿದರೂ ಫಲ ನೀಡಲಿಲ್ಲ. ಸದನ ಮತ್ತೆ ಸೇರುತ್ತಿದ್ದಂತೆ ಬಿಜೆಪಿ ಸದಸ್ಯರು ತಮ್ಮ ನಿಲುವಿಗೆ ಪಟ್ಟು ಹಿಡಿದರು.  ಸಚಿವರು ತಮ್ಮ ಪಕ್ಷದ ಹೆಸರನ್ನು ತೆಗೆದುಕೊಂಡಿದ್ದರಿಂದ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಸದಸ್ಯರು ರವಿಕುಮಾರ್ ಹೇಳಿದರು. “ಸಚಿವರೊಬ್ಬರು ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದರೂ ಸಮುದಾಯದ ಪರವಾಗಿ ಮಾತನಾಡಿದ್ದಾರೆ. ಅವರು ಸಂಪುಟದಲ್ಲಿ ಮುಂದುವರಿಯಲು ಯೋಗ್ಯರಲ್ಲ, ಎಂದು ಅವರು ಹೇಳಿದರು.

    ಸದನವನ್ನು ಮತ್ತೆ ಮುಂದೂಡಲಾಯಿತು. ಕಲಾಪ ಪುನರಾರಂಭವಾದಾಗ, ಜಮೀರ್‌ನಿಂದ  ಕ್ಷಮೆಯಾಚಿಸುವಂತೆ  ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು. “ಅವರು ವಿಷಾದ ವ್ಯಕ್ತಪಡಿಸಲು ಸಿದ್ಧರಿಲ್ಲದಿದ್ದರೆ, ಇಡೀ ಘಟನೆಯ ತನಿಖೆಗೆ ಸದನ ಸಮಿತಿಯನ್ನು ರಚಿಸಬೇಕು” ಎಂದು  ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap