ಸಿಎಎ ಜಾರಿ : ಸುಪ್ರೀಂ ಕದ ತಟ್ಟಿದ ಓವೈಸಿ

ನವದೆಹಲಿ: 

    ಕೇಂದ್ರದ ಮೋದಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (CAA)ವನ್ನು ಪ್ರಶ್ನಿಸಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಐಎಂ) ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

    ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿ ಪ್ರಶ್ನಿಸಿ ಎಐಎಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಶನಿವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ನಾಲ್ಕು ವರ್ಷಗಳ ಬಳಿಕ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂದಿದೆ ಎಂದು ಆರೋಪಿಸಿದ್ದಾರೆ.

     ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಯವರು 2019ರ ಡಿಸೆಂಬರ್‌ನಲ್ಲಿ ಅಂಕಿತ ಹಾಕಿದ್ದರು. ಆದರೆ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ನಾಲ್ಕು ವರ್ಷಗಳ ಬಳಿಕ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂದಿದೆ ಎಂದು ಒವೈಸಿ ಆರೋಪಿಸಿದ್ದಾರೆ.

    ಪೌರತ್ವದ ಸ್ಥಿತಿಯ ಮಂಜೂರಾತಿಯನ್ನು ಕೋರಿ ಯಾವುದೇ ಅರ್ಜಿಗಳನ್ನು ಸರ್ಕಾರವು ಪೌರತ್ವ ಕಾಯಿದೆ, 1955 (ಪೌರತ್ವ (ತಿದ್ದುಪಡಿ) ಕಾಯಿದೆ, 2019 ರ ಮೂಲಕ ತಿದ್ದುಪಡಿ ಮಾಡಿರುವಂತೆ) ಸೆಕ್ಷನ್ 6B ಅಡಿಯಲ್ಲಿ ವಿಚಾರಣೆಯ ಬಾಕಿಯಿರುವಾಗ ಪರಿಗಣಿಸುವುದಿಲ್ಲ ಅಥವಾ ಪ್ರಕ್ರಿಯೆಗೊಳಿಸುವುದಿಲ್ಲ.

    ತತ್‌ಕ್ಷಣದ ರಿಟ್ ಅರ್ಜಿಯ ಅಂತಿಮ ವಿಲೇವಾರಿಯಾಗುವವರೆಗೆ ದೋಷಪೂರಿತ ಪೌರತ್ವ ತಿದ್ದುಪಡಿ ಕಾಯ್ದೆ, 2019 ಮತ್ತು ತಿದ್ದುಪಡಿ ನಿಯಮಗಳು, 2024 ರ ಅನುಷ್ಠಾನವನ್ನು ತಡೆಹಿಡಿಯುವ ನಿರ್ದೇಶನಗಳನ್ನು ನೀಡಿ ಎಂದು ಒವೈಸಿ ಸುಪ್ರೀಂ ಕೋರ್ಟ್ ಗೆ ತಮ್ಮ ಅರ್ಜಿ ಮೂಲಕ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link