ಕೊರಟಗೆರೆ : ವೈದ್ಯನ ನಿರ್ಲಕ್ಷಕ್ಕೆ ರೋಗಿ ಬಲಿ : ಸಂಬಂಧಿಕರ ಆಕ್ರೋಶ

ಕೊರಟಗೆರೆ :-

   ವೈದ್ಯೋ ನಾರಾಯಣೋ ಹರಿ ಎಂಬ ನಾಳ್ನುಡಿಗೆ ವಿರುದ್ಧವಾಗಿ ಇಲ್ಲೊಬ್ಬ ವೈದ್ಯ ತನ್ನ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಸಮರ್ಪಕವಾಗಿ ಮಾಹಿತಿ ನೀಡದೆ ರೋಗಿ ಸಾವಿಗೆ ಕಾರಣರಾಗಿದ್ದಾರೆ ಎಂದು ಕೊರಟಗೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಕೊರಟಗೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಘಟನೆ ಜರುಗಿದ್ದು, ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಶಕುನಿ ತಿಮ್ಮನಹಳ್ಳಿ ಗ್ರಾಮದ ಮಲ್ಲೇಶಯ್ಯ ಎಂಬುವರು ರಕ್ತದೊತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ವೈದ್ಯ ಡಾ. ಶಶಿಧರ್ ಎಂಬುವರ ಬಳಿ ಬಂದು ಬಿಪಿ ಸೇರಿದಂತೆ ಇಸಿಜಿಯನ್ನ ಮಾಡಿಸಲಾಗಿ ಇಸಿಜಿಯಲ್ಲಿ ಹೃದಯ ಸಂಬಂಧಿ ಕಾಯಿಲೆ ಇದ್ದರೂ ಸಮರ್ಪಕವಾಗಿ ಮಾಹಿತಿ ನೀಡದೆ ರೋಗಿ ಸಾವಿಗೆ ಕಾರಣರಾಗಿದ್ದಾರೆ ಎಂದು ಪೋಷಕರು ಆರೋಪಿಸಲಾಗಿದೆ.

   ಮಧ್ಯಾಹ್ನ 12 ಗಂಟೆ ಸಂದರ್ಭದಲ್ಲಿ ಬಂದು ಕಳೆದ 3-4 ದಿನಗಳಿಂದ ರಕ್ತ ಒತ್ತಡ (ಬಿಪಿ) ಸಂಬಂಧಿಸಿದ ಮಾತ್ರೆಗಳು ಖಾಲಿಯಾದ ಕಾರಣ ತೆಗೆದುಕೊಂಡಿಲ್ಲ, ಬಿಪಿ ಹೆಚ್ಚಾದಂತೆ ಕಂಡು ಬರುತ್ತಿದೆ ಎಂದು ವೈದ್ಯರ ಬಳಿ ತಪಾಸಣೆ ಗೆಂದು ಬಂದ ಸಂದರ್ಭದಲ್ಲಿ ವೈದ್ಯ ಡಾ.ಶಶಿಧರ್ ಬಿಪಿ ಹಾಗೂ ಇಸಿಜಿ ಮಾಡಲಾಗಿ ಇಸಿಜಿಯಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವುದು ಕಂಡುಬಂದರೂ ಸಹ ಅವರ ಮನೆಯವರಿಗಾಗಲಿ ಅಥವಾ ರೋಗಿಗಾಗದಲ್ಲಿ ಯಾವುದೇ ಮಾಹಿತಿ ನೀಡದೆ ರೋಗಿಗೆ ಅಂತ ಗಂಭೀರವಾದಂತ ಯಾವುದೇ ಖಾಯಿಲೆಗಳಿಲ್ಲ ನೀವು ತುಮಕೂರಿಗೆ ನಿಧಾನವಾಗಿ ಹೋಗಿ ಸ್ಕ್ಯಾನಿಂಗ್ ಹಾಗೂ ಇನ್ನಿತರ ಟೆಸ್ಟ್ ಮಾಡಿಸಿ ಎಂದು ನಿರ್ಲಕ್ಷ್ಯವಾಗಿ ಹಾಗೂ ಬೇಜವಾಬ್ದಾರಿ ಯುತವಾಗಿ ಹೇಳಿದ್ದರಿಂದ ನಾವು ತುಮಕೂರಿನ ಆಸ್ಪತ್ರೆಗೆ ತಲುಪಲು ನಿಧಾನ ಮಾಡಿದವು ಆದರೆ ನಾವು ತುಮಕೂರು ಆಸ್ಪತ್ರೆ ತಲುಪುವ ವೇಳೆಗೆ ಸಾವಿಗೀಡಾಗಿದ್ದಾರೆ ಎಂದು ವೈದ್ಯರ ವಿರುದ್ಧ ಆರೋಪಗಳ ಸುರಿಮಳೆಗೆರದಿದ್ದಾರೆ.

   ವೈದ್ಯರಾದ ಡಾ. ಶಶಿಧರ್ ರೋಗಿ ಮಲ್ಲೇಶಯ್ಯ ಎಂಬವರಿಗೆ ಹೃದಯ ಸಂಬಂಧಿಸಿದಂತೆ ತೀವ್ರವಾಗಿ ಇಸಿಜಿನಲ್ಲಿ ತೊಂದರೆ ಕಂಡು ಬರುತ್ತಿದ್ದರೂ ಸಹ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯವಾಗಿ ಸಮರ್ಪಕವಾಗಿ ಪೋಷಕರಿಗೆ ತಿಳಿಸದ ಕಾರಣ ರೋಗಿಯನ್ನ ಆಂಬುಲೆನ್ಸ್ ನಿಂದಾಗಲಿ ಅಥವಾ ಪ್ರತ್ಯೇಕ ಖಾಸಗಿ ಕಾರಿನಿಂದಾಗಲಿ ಇಲ್ಲವೇ ಬೇರೆ ಯಾವುದೇ ತ್ವರಿತಗತಿಯಲ್ಲಿ ತುಮಕೂರಿನ ಅಥವಾ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಬಹುದು ಆದರೆ ವೈದ್ಯರ ನಿರ್ಲಕ್ಷ್ಯ ಬೇಜವಾಬ್ದಾರಿ ತನದಿಂದ ಸಮರ್ಪಕವಾಗಿ ಮಾಹಿತಿ ನೀಡಿದ ಕಾರಣ ರೋಗಿ ಹಾಗೂ ಅವರ ಮನೆಯವರು ವಿನಾಕಾರಣ ಆಸ್ಪತ್ರೆ ಬಳಿ ವಿಶ್ರಾಂತಿ ಗೃಹದ ಬಳಿ ಕಾಲಾರಾಣ ಮಾಡಿ ರೋಗಿಗೆ ಯಾವುದೇ ಕಾಯಿಲೆ ಇಲ್ಲ ಎಂದುಕೊಂಡು ನಿಧಾನವಾಗಿ ಬಸ್ಸಿನಲ್ಲಿ ತುಮಕೂರಿಗೆ ತಲುಪಿದಾಗ ತುಮಕೂರಿನ ಬಸ್ ಸ್ಟಾಂಡ್ ಬಲಿ ತಲೆ ಸುತ್ತಿ ಬಿದ್ದ ಸಂದರ್ಭದಲ್ಲಿ ಗಾಬರಿಗೊಂಡ ಪೋಷಕರು ಆಟೋ ಮೂಲಕ ಜಿಲ್ಲಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುತ್ತರಾದರೊ ವೈದ್ಯರು ಉಪಚರಿಸಲು ಪ್ರಯತ್ನಿಸುವ ಸಂದರ್ಭಕ್ಕೆ ಕೊನೆ ಉಸಿರು ಹೇಳದಿದ್ದರೂ ಎನ್ನಲಾಗಿದೆ.

ಪೋಷಕರ ಆಕ್ರೋಶ

   ನಮ್ಮ ತಂದೆ ಮಲ್ಲೇಶಯ್ಯ ಗೆ ಈವರೆಗೂ ಯಾವುದೇ ಹೃದಯ ಸಂಬಂಧಿ ಕಾಯಿಲೆಗಳು ಇರಲಿಲ್ಲ, ಕೇವಲ ಬಿಪಿಗೆ ಸಂಬಂಧಿಸಿದಂತೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು ಕಳೆದ ಎರಡು ಮೂರು ತಿಂಗಳಿಂದ ಮಾತ್ರೆ ನುಂಗಿಲ್ಲ ಎಂಬ ಮಾಹಿತಿ ಇದೆ, ಬೆಳಿಗ್ಗೆಯಿಂದ ನಮ್ಮ ತಂದೆ ಸ್ವಲ್ಪ ಮಂಕಾಗಿದ್ದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಬಂದೆ ಆದರೆ ಇಲ್ಲಿ ನಾವು ವೈದ್ಯ ಶಶಿಧರ್ ಬಿಪಿ ಹಾಗೂ ಇಸಿಜಿ ಮಾಡಿಸಿದರಾದರೂ ಇಸಿಜಿಯಲ್ಲಿ ಹೃದಯ ಸಂಬಂಧಿ ಕಾಯಿಲೆ ಇದ್ದರು ಸಮರ್ಪಕವಾಗಿ ಮಾಹಿತಿ ನೀಡದೆ ಇದ್ದ ಕಾರಣ ನಾವು ತುಮಕೂರಿಗೆ ಹೋಗಿ ಚಿಕಿತ್ಸೆ ಕೊಡಿಸಲು ಕಾಲಹರಣ ಮಾಡಿದೆವು, 1-1.30 ಗಂಟೆ ವಿನಾಕಾರಣ ಕಾಲಹರಣ ಮಾಡಿದೆವು ನಮಗೆ ಸಮರ್ಪಕವಾಗಿ ಮಾಹಿತಿ ನೀಡಿದ್ದರೆ ತ್ವರಿತವಾಗಿ ಚಿಕಿತ್ಸೆ ಕೊಡುತ್ತಿದ್ದೆವು ನಮ್ಮ ತಂದೆಯ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮಗ ಶಿವಣ್ಣ ಗುರುತರ ಆರೋಪ ಮಾಡಿದ್ದಾರೆ.

   ವೈದ್ಯೋ ನಾರಾಯಣೋ ಹರಿ ಎಂದು ವೈದ್ಯರನ್ನ ಕರೆಯಲಾಗುತ್ತದೆ, ವೈದ್ಯ ಸಾಕ್ಷಾತ್ ನಾರಾಯಣನ ರೂಪದಲ್ಲಿ ಸರ್ವ ಕಾಲದಲ್ಲೂ ರಕ್ಷಣೆ ಮಾಡಬೇಕು ಆದರೆ ನಿರ್ಲಕ್ಷ ಮಾಡಿದರೆ ರಾಕ್ಷಸ ರೂಪದಲ್ಲಿ ಅಥವಾ ಯಮುರಾಯನ ರೂಪದಲ್ಲಿ ಬರುತ್ತಾನೆ, ಅದೇ ಕೆಲಸ ಕೊರಟಗೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ, ವೈದ್ಯ ಶಶಿಧರ್ ಸಮರ್ಪಕವಾಗಿ ನಮಗೆ ಮಾಹಿತಿ ನೀಡಿದ್ದರೆ ತ್ವರಿತವಾಗಿ ತುಮಕೂರಿನ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿಕೊಳ್ಳುತ್ತಿದ್ದೆವು, ವೈದ್ಯರ ನಿರ್ಲಕ್ಷ್ಯ ಬೇಜವಾಬ್ದಾರಿತನ ದಿಂದ ಸಮರ್ಪಕ ಮಾಹಿತಿ ನೀಡದ ಕಾರಣ ರೋಗಿಸಾವಿಗೆ ಕಾರಣರಾಗಿದ್ದಾರೆ.-ಜಯಣ್ಣ (ಹೆಬ್ಬಾಕ)… ಮೃತ ಮಲ್ಲೇಶಯ್ಯನವರ ಸಂಬಂಧಿ

Recent Articles

spot_img

Related Stories

Share via
Copy link