ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 

ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪ್ರಧಾನಿ ಮೋದಿ ಸೋಮವಾರ ಪರಿಶೀಲನೆ ನಡೆಸಿದ್ದಾರೆ ಈ ಪುರಾತನ ವಸ್ತುಗಳು 9ರಿಂದ 10ನೇ ಶತಮಾನದವುಗಳಾಗಿವೆ.

ಈ ಪುರಾತನ ವಸ್ತುಗಳನ್ನು 6 ವಿಶಾಲ ವಿಭಾಗಗಳಲ್ಲಿ ವಿಂಗಡಿಸಲಾಗಿದೆ – ಶಿವ ದೇವರು ಮತ್ತು ಅವರ ಶಿಷ್ಯರು, ಶಕ್ತಿ ದೇವರ ಆರಾಧನೆ, ಭಗವಾನ್ ವಿಷ್ಣು ಮತ್ತು ಅವನ ವಿವಿಧ ರೂಪಗಳು, ಜೈನ ಪದ್ಧತಿ-ಸಂಪ್ರದಾಯಗಳು, ಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಸೇರಿವೆ.

ಪುಟಿನ್ ಕೆಟ್ಟೋನು ಅಂತ್ಲೇ ಅಂದ್ಕೊಳಿ: ರಷ್ಯಾ ಉಕ್ರೇನ್ ಯುದ್ಧ ನೋಡುವ ಮೂರು ಕ್ರಮಗಳಿವು

ಪ್ರಧಾನಿ ಮೋದಿಯವರು ಪರಿಶೀಲಿಸಿದ 29 ಪುರಾತನ ವಸ್ತುಗಳು, ಮುಖ್ಯವಾಗಿ ಮರಳುಗಲ್ಲು, ಅಮೃತಶಿಲೆ, ಕಂಚು, ಹಿತ್ತಾಳೆ, ಕಾಗದದ ವಿವಿಧ ವಸ್ತುಗಳಲ್ಲಿ ರಚಿಸಲಾದ ಶಿಲ್ಪಗಳು ಮತ್ತು ವರ್ಣಚಿತ್ರಗಳು ಸೇರಿವೆ.

ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳವನ್ನು ಈ ಕಲಾಕೃತಿಗಳು ಪ್ರತಿನಿಧಿಸುತ್ತವೆ.ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ಟ್ ಮಾರ್ರಿಸನ್ ವರ್ಚುವಲ್ ಸಭೆಯನ್ನು ನಡೆಸಲಿದ್ದಾರೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link