IPL 2022: ರಾಜಸ್ಥಾನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡಿದ ಆರ್​ಸಿಬಿ

 IPL 2022:

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿ ಆಗಲಿದೆ. ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಆರ್​​ಆರ್​​ಗೆ ಸೋಲಿನ ರುಚಿಯನ್ನು ಆರ್​​ಸಿಬಿ ನೀಡುತ್ತಾ ಎಂಬುದು ನೋಡಬೇಕಿದೆ.

ಐಪಿಎಲ್ 2022 ರಲ್ಲಿಂದು (IPL 2022) ಹೈವೋಲ್ಟೇಜ್ ಕದನ ನಡೆಯಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜು ಸ್ಯಾಮ್ಸನ್  ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಹಾಗೂ ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡ ಮುಖಾಮುಖಿ ಆಗಲಿದೆ. ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಆರ್​​ಆರ್​​ಗೆ ಸೋಲಿನ ರುಚಿಯನ್ನು RCB ನೀಡುತ್ತಾ ಎಂಬುದು ನೋಡಬೇಕಿದೆ.

ಚಿರಂಜೀವಿ ಸರ್ಜಾ ನಟನೆಯ ‘ರಾಜ ಮಾರ್ತಾಂಡ’ ಸಿನಿಮಾ ಪೋಸ್ಟರ್ ಬಿಡುಗಡೆ

ರಾಜಸ್ಥಾನ್ ತಂಡ ಪಾಯಿಂಟ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಆಡಿದ ಎರಡು ಪಂದ್ಯಗಳ ಪೈಕಿ ಎರಡರಲ್ಲೂ ಗೆಲುವು ಸಾಧಿಸಿ ಒಟ್ಟು 4 ಅಂಕದೊಂದಿಗೆ +2.100 ರನ್​​ರೇಟ್​ನೊಂದಿಗೆ ಟಾಪ್​ನಲ್ಲಿದೆ. ಇತ್ತ ಬೆಂಗಳೂರು ತಂಡ ಏಳನೇ ಸ್ಥಾನದಲ್ಲಿದೆ. ಎರಡು ಅಂಕದೊಂದಿಗೆ ನಿವ್ವಳ ರನ್ ರೇಟ್ -0.048 ಆಗಿದೆ. ಆರ್‌ಸಿಬಿ ಸೋಲಿನ ಆರಂಭದ ಬಳಿಕ ಗೆಲುವಿನ ಖುಷಿ ಆಚರಿಸಿದ್ದು ಇಂದಿನ ಪಂದ್ಯದಲ್ಲಿ ಯಾವರೀತಿ ಪ್ರದರ್ಶನ ತೋರುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಏಪ್ರಿಲ್ 9 &10 ರಂದು ಫ್ರಾನ್ಸ್ ಕ್ರಿಕೆಟ್ ಲೀಗ್ ನ ಅಬ್ಬರ

ಆರ್‌ಸಿಬಿಯು ಎರಡು ಪಂದ್ಯಗಳಲ್ಲಿ ಆಡಿದ್ದು ಒಂದು ಸೋತು ಮತ್ತೊಂದರಲ್ಲಿ ಗೆದ್ದಿದೆ. ಆದರೆ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ನಾಯಕ ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಅನುಜ್ ರಾವತ್ ಎರಡನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ಇವರು ಲಯ ಕಂಡುಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ. ಅನುಭವಿ ದಿನೇಶ್ ಕಾರ್ತಿಕ್ ಫಿನಿಷರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ಇನ್ನೂರಕ್ಕೂ ಹೆಚ್ಚು ರನ್‌ಗಳ ಮೊತ್ತವನ್ನು ಪೇರಿಸಿಯೂ ಸೋತಿದ್ದ ತಂಡವು, ಎರಡನೇ ಪಂದ್ಯದಲ್ಲಿ 128 ರನ್‌ಗಳ ಗುರಿ ಸಾಧಿಸಲು ಕಷ್ಟಪಟ್ಟಿತ್ತು. 19.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗೆದ್ದು ನಿಟ್ಟುಸಿರುಬಿಟ್ಟಿತ್ತು. ಆದರೆ ಆ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಲಯ ಕಂಡುಕೊಂಡಿದ್ದರು. ಶ್ರೀಲಂಕಾದ ವನಿಂದು ಹಸರಂಗಾ, ಆಕಾಶ್ ದೀಪ್ ಮತ್ತು ಹರ್ಷಲ್ ಪಟೇಲ್ ಕೋಲ್ಕತ್ತಾ ಬ್ಯಾಟರ್‌ಗಳಿಗೆ ಮಾರಕವಾಗಿದ್ದರು. ಇದೇ ಪ್ರದರ್ಶನ ಆರ್​ಆರ್​​ ವಿರುದ್ಧವೂ ನೀಡಬೇಕಿದೆ. ಜೊತೆಗೆ ಸ್ಯಾಮ್ಸನ್ ಪಡೆಯ ಬ್ಯಾಟಿಂಗ್ ಅನ್ನು ಕಟ್ಟಿ ಹಾಕಲು ಮತ್ತೊಬ್ಬ ಸ್ಪಿನ್ನರ್ ಅನ್ನು ಕಣಕ್ಕಿಳಿಸುವ ಪ್ಲಾನ್ ಮಾಡಿಕೊಂಡಿದ್ದರೆ ಅಚ್ಚರಿ ಪಡಬೇಕಿಲ್ಲ.

ಅಮೀರ್ ಖಾನ್ ‘PK’ ಹಿಂದಿಕ್ಕಿ ಗಳಿಕೆಯಲ್ಲಿ ದಾಖಲೆ ಬರೆದ ‘RRR’: 10 ದಿನಗಳಲ್ಲಿ 900 ಕೋಟಿ ರೂ. ಕಲೆಕ್ಷನ್

ಇತ್ತ ಆರಂಭಿಕ ಎರಡೂ ಪಂದ್ಯಗಳಲ್ಲೂ ಸುಲಭ ಗೆಲುವು ಕಂಡಿರುವ ರಾಜಸ್ಥಾನ ರಾಯಲ್ಸ್ ತಂಡ ಬಲಿಷ್ಠ ಬೌಲಿಂಗ್ ಪಡೆ ಹೊಂದಿದೆ. ಕನ್ನಡಿಗ ಪ್ರಸಿದ್ಧ ಕೃಷ್ಣ, ಟ್ರೆಂಟ್ ಬೌಲ್ಡ್, ನವದೀಪ್ ಸೈನಿ ವೇಗದ ವಿಭಾಗದ ಜವಾಬ್ದಾರಿ ನಿಭಾಯಿಸುತ್ತಿದ್ದು, ಅನುಭವಿ ಸ್ಪಿನ್ನರ್‌ಗಳಾದ ಆರ್. ಅಶ್ವಿನ್, ಯುಜ್ವೇಂದ್ರ ಚಹಲ್ ಪ್ರಮುಖ ಆಸ್ತಿಯಾಗಿದ್ದಾರೆ. ಶಿಮ್ರೊನ್ ಹೆಟ್ಮೆಯೆರ್, ಕಳೆದ ಪಂದ್ಯದ ಶತಕದ ಸಾಧಕ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಕರ್ನಾಟಕದ ದೇವದತ್ ಪಡಿಕಲ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಒಳಗೊಂಡ ಬ್ಯಾಟಿಂಗ್ ಪಡೆ ಆರ್‌ಸಿಬಿ ಬೌಲರ್‌ಗಳಿಗೆ ಸವಾಲಾಗುವುದು ಖಚಿತ. ಹೀಗಾಗಿ ಜಯದ ನಾಗಾಲೋಟದಲ್ಲಿರುವ ತಂಡದಲ್ಲಿ ಬದಲಾವಣೆ ಮಾಡುವುದು ಅನುಮಾನ.

ಮುಖಾಮುಖಿ: ರಾಜಸ್ಥಾನ್ ರಾಯಲ್ಸ್ ಹಾಗೂ ಆರ್‌ಸಿಬಿ ತಂಡವು 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ 12 ಪಂದ್ಯಗಳಲ್ಲಿ ಗೆಲುವನ್ನ ಸಾಧಿಸಿದರೆ, ರಾಜಸ್ಥಾನ್ 10 ಪಂದ್ಯಗಳಲ್ಲಿ ಗೆದ್ದಿದೆ. 2 ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ವಾಂಖೆಡೆ ಸ್ಟೇಡಿಯಂನಲ್ಲಿ ಉಭಯ ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದು, ಆರ್‌ಸಿಬಿ ಪಂದ್ಯ ಜಯಿಸಿದ ದಾಖಲೆ ಹೊಂದಿದೆ.

ಆಯಂಕರ್ ಅನುಶ್ರೀ ತಂದೆ ವಿಚಾರ ಮಾಧ್ಯಮದವರಿಗೆ ನೀಡಿದ್ದಕ್ಕೆ ಬೇಸರ..!

ಪಿಚ್ ವರದಿ: ವಾಂಖೆಡೆ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಸ್ವರ್ಗ ಎನಿಸಿಕೊಂಡಿದೆ. ಆರ್‌ಸಿಬಿ ಹಾಗೂ ಆರ್‌ಆರ್ ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಕಾರಣ ದೊಡ್ಡ ಮೊತ್ತವನ್ನು ಇಲ್ಲಿ ನಿರೀಕ್ಷಿಸಲಾಗುತ್ತಿದೆ. ಇನ್ನಿಂಗ್ಸ್‌ನ ಆರಂಭದಲ್ಲಿ ವೇಗಿಗಳಿಗೆ ಸ್ವಲ್ಪ ನೆರವು ಸಿಗಬಹುದು. ಇನ್ನು ಇಬ್ಬನಿ ಈ ಪಂದ್ಯದಲ್ಲಿಯೂ ಹೆಚ್ಚಿನ ಪರಿಣಾಮವನ್ನು ಬೀರಬಹುದು. ಇಲ್ಲಿ ಮೊದಲ ಬ್ಯಾಟ್ ಮಾಡುವ ತಂಡಕ್ಕೆ ಗೆಲುವು ಎಂಬುದು ಅನೇಕ ಬಾರಿ ಸಾಭೀತಾಗಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap