ಯೋಗ ಮತ್ತು ಆಧ್ಯಾತ್ಮಿಕತೆ ಮನುಷ್ಯನ ಆರೋಗ್ಯಕ್ಕೆ ಹೊಸ ಸ್ಪರ್ಶ ನೀಡುತ್ತದೆ : ರಘುಮೂರ್ತಿ

ನಾಯಕನಹಟ್ಟಿ

    ಯೋಗ ಮತ್ತು ಆಧ್ಯಾತ್ಮಿಕತೆ ಸಮೂಹವಾಗಿ ಮನುಷ್ಯನ ಆರೋಗ್ಯಕ್ಕೆ ಹೊಸ ಸ್ಪರ್ಶ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೊಡುಗೆ ಬಹಳಷ್ಟು ಇದೆ ಎಂದು ನಿವೃತ್ತ ತಶೀಲ್ದಾರ್ ರಘುಮೂರ್ತಿ ಹೇಳಿದರು.ನಾಯಕನಹಟ್ಟಿ ಪಟ್ಟಣದ ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆ ಆವರಣದಲ್ಲಿ 11 ನೇ ವರ್ಷದ ಅಂತಾರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮಾತನಾಡಿದರು.   ಯೋಗಕ್ಕೂ ಭಾರತಕ್ಕೂ ಅವಿನ ಭಾವ ಸಂಬಂಧ ಧಾರ್ಮಿಕ ತಪಸ್ವಿಗಳು ಭಾರತದಲ್ಲಿ ಯೋಗಕ್ಕೆ ಶರಣಾಗಿದ್ದರು.ತದನಂತರ ಸ್ವಾಮಿ ವಿವೇಕಾನಂದರು ಚಿಕಾಗೋ ನಗರದಲ್ಲಿ ಭಾರತ ಮತ್ತು ಹಿಂದೂ ಧರ್ಮದ ಸಂಸತ್ ಅಧಿವೇಶನದಲ್ಲಿ ಯೋಗ ಮತ್ತು ಆಧ್ಯಾತ್ಮಿಕತೆಯ ಉಪದೇಶ ಇಡೀ ವಿಶ್ವವನ್ನೇ ಬೆರಗು ಗೊಳಿಸಿತು.ಅಂದಿನಿಂದ ಪಾಶ್ಚತ್ಯ ರಾಷ್ಟ್ರಗಳಲ್ಲಿ ಯೋಗದ ಪರಿಚಯವಾಯಿತು.

   20ನೇ ದಶಕದವರೆಗೂ ಕೂಡ ಯೋಗ ಮತ್ತು ಆಧ್ಯಾತ್ಮಿಕತೆ ಸಾಮೂಹಿಕವಾಗಿರಲಿಲ್ಲ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯಲ್ಲಿ ಭಾರತೀಯ ಯೋಗ ಮತ್ತು ಆಧ್ಯಾತ್ಮಿಕತೆಯ ವಿಷಯ ಮಂಡಿಸಿದಾಗ ವಿಶ್ವಸಂಸ್ಥೆ ಇದನ್ನು ಒಪ್ಪಿಕೊಂಡು ಅಂದಿನಿಂದ ವಿಶ್ವ ಯೋಗ ದಿನಾಚರಣೆ ಅನುಷ್ಠಾನಗೊಂಡಿತು.ಈ ವಿಷಯವನ್ನು ಭಾರತೀಯರದ ನಾವುಗಳು ಹೆಮ್ಮೆ ಪಡಬೇಕು.

   ದೇಹ ಮತ್ತು ಮನಸ್ಸು ಧ್ಯಾನದಿಂದ ಸಕ್ರಿಯಗೊಳ್ಳುತ್ತದೆ ಹೃದಯ ಮೆದುಳು ಸ್ವಾಶಕೋಶ ಮತ್ತು ಮೂತ್ರಕೋಶಗಳಿಗೆ ಸಂಬಂಧಿಸಿದ ಪ್ರಿಯ ಗಳಿಗೆ ಧ್ಯಾನ ರಾಮಬಾಣವಾಗುತ್ತದೆ ತರಲು ಚಿತ್ರದುರ್ಗದ ಯುವಕರಿಗೆ ತಮ್ಮಗಳ ಅಂಗ ಸೌ ವುಷ್ಠವ ವೃದ್ಧಿಯಾಗಲು
ಯೋಗ ಸಹಕಾರಿ ಇಂತಹ ಯೋಗ ಮತ್ತು ಶಾರೀರಿಕ ಕಸರತ್ತಿನಿಂದ ದುರ್ಗದ ದೊರೆ ಮದಕರಿ ನಾಯಕ ಆನೆಯನ್ನು ಪಳಗಿಸುತ್ತಿದ್ದ.

   ಯುವಕರ ಅಂಗಸವುಷ್ಟವ ಮತ್ತು ಸೌಂದರ್ಯಕ್ಕೆ ಬೇರೆ ಯಾವುದೇ ಔಷಧಿ ಇಲ್ಲ ಅದು ಯೋಗ ಆಧ್ಯಾತ್ಮಿಕತೆ ಮತ್ತು ದೈಹಿಕ ಪರಿಶ್ರಮದಿಂದ ಮಾತ್ರ ಸಾಧ್ಯ ಹಾಗಾಗಿ ಯೋಗ ಮತ್ತು ಆಧ್ಯಾತ್ಮಿಕತೆ ಮನುಷ್ಯನ ದೈನಂದಿನ ಬದುಕಿನಲ್ಲಿ ಹಾಸು ಹೊಕ್ಕಾಗಬೇಕು ಎಂದು ಹೇಳಿದರು. ತಿಪ್ಪೆ ರುದ್ರ ಸ್ವಾಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಮ್. ವೈ.ಟಿ.ಸ್ವಾಮಿ ಮಾತನಾಡಿ ಮನುಷ್ಯನಿಗೆ ಯೋಗದ ಅನುಕೂಲಗಳು ಸಾ ಕಷ್ಟಗಿದ್ದು ಇಂದಿನ ಯುವಕರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಯೋಗದ ಕಡೆ ಮುಖ ಮಾಡಬೇಕು.

   ತಮ್ಮ ದೈನಂದಿನ ಜೀವನದಲ್ಲಿ ದೀಪ ಸಮಯವನ್ನು ಯೋಗಕ್ಕಾಗಿ ಮೀಸಲಿಡಬೇಕೆಂದು ಹೇಳಿದರು.ಯೋಗಕ್ಕೆ ಕುರಿತಾದಂತಹ ಒಂದು ಸಾವಿರ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಆಚರಿಸುವುದರ ಜೊತೆಗೆ ಪಟ್ಟಣದಲ್ಲಿ ಪ್ರಭಾತ್ ಬೇರೆ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು ಇದೇ ಸಂದರ್ಭದಲ್ಲಿ ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಚನಗನಹಳ್ಳಿ ಮಲ್ಲೇಶ್ , ಎಸ್ಟಿ ಮೋರ್ಚಾದ ಅಧ್ಯಕ್ಷ ಶಿವಣ್ಣ, ಬಿಜೆಪಿ ಕಾರ್ಯದರ್ಶಿ ಗೋವಿಂದಪ್ಪ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಲೋಕೇಶ್ ಉಪ ಪ್ರಾಂಶುಪಾಲ ರಮೇಶ್ ಮುಖ್ಯೋಪಾಧ್ಯಾಯನಿ ತಿಪ್ಪಮ್ಮ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link