ರಾಜ್ಯಪಾಲರಿಲ್ಲದೆಯೇ ನಡೆದ ಬೆಂಗಳೂರು ವಿವಿ ಘಟಿಕೋತ್ಸವ ಕಾರ್ಯಕ್ರಮ….!

ಬೆಂಗಳೂರು

    ನಿನ್ನೆ ನಡೆದ 59ನೇ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ 26 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯ್ತು. ಆದರೆ ಇದೇ ಮೊದಲ ಬಾರಿಗೆ ರಾಜ್ಯಪಾಲರ  ಗೈರುಹಾಜರಿಯಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಿತು. ಘಟಿಕೋತ್ಸವಕ್ಕೆ ರಾಜ್ಯಪಾಲರು ಗೈರಾದ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಸಿದ್ದರಾಮಯ್ಯ ಮೂಡಾ ಪ್ರಕರಣದ ಚರ್ಚೆ ಮಧ್ಯೆ ಘಟಿಕೋತ್ಸವದಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ದೂರ ಉಳಿದಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣ ಸಚಿವ ಡಾ‌.ಎಂ.ಸಿ.ಸುಧಾಕರ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು.

 
    ಘಟಿಕೋತ್ಸವ ಕಾರ್ಯಕ್ರಮಕ್ಕೆ ಅಶ್ವಿನಿ ಪುನಿತ್ ರಾಜ್ ಕುಮಾರ್, ನಟಿ ಪ್ರಿಯಾಂಕ ಉಪೇಂದ್ರ ಭಾಗವಹಿಸಿದ್ದರು. ಈ ಬಾರಿ ಒಟ್ಟು 168 ವಿದ್ಯಾರ್ಥಿಗಳು ಚಿನ್ನದ ಪದಕ ಗೆದಿದ್ದಾರೆ. ಪ್ರತಿ ಸಲದಂತೆ ಈ ವರ್ಷವೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಕೆಮಿಸ್ಟ್ರಿ ವಿಭಾಗದ ವಿದ್ಯಾರ್ಥಿನಿ ಅನ್ನಪೂರ್ಣ ಎಂಬುವವರು 9 ಗೋಲ್ಡ್ ಮೆಡಲ್ ಪಡೆದು ಚಿನ್ನದ ‌ನಗೆ ಬೀರಿದ್ರು. 140 ಜನರಿಗೆ ಪಿಹೆಚ್ ಡಿ ಪದವಿ ಪ್ರಧಾನಿಸಲಾಯ್ತು.
   ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕಾರ್ಯಕ್ರಮದಲ್ಲಿ ವಿವಿ ವಿಚಾರ ಬಿಟ್ಟು ಎಸ್​​​ಇಪಿ ನೀತಿ ಜಾರಿ ಮಾಡುವ ವಿಚಾರ ಪ್ರಸ್ತಾಪಿಸಿದ್ರು. ಎನ್​ಇಪಿ ಕರ್ನಾಟಕ ವಿರೋಧಿಸಿದೆ, ನಾವು ಈ ವರ್ಷ ಎಸ್ ಇಪಿ ಜಾರಿ ಮಾಡ್ತಾ ಇದ್ದೀವಿ ಎಂದರು.

Recent Articles

spot_img

Related Stories

Share via
Copy link
Powered by Social Snap