ಬೆಂಗಳೂರು :
ರಣಜಿ ಕ್ರಿಕೆಟ್ ಅಂಪೈರ್ ಮತ್ತು ಕ್ರಿಕೆಟ್ ವೀಕ್ಷಕ ವಿವರಣೆಗಾರ ಬಾಪು ಹನುಮಂತರಾವ್ ನಿಧನರಾಗಿದ್ದಾರೆ.
ಅಮೆರಿಕಾದ ಚಿಕಾಗೋದಲ್ಲಿ ಅವರು ಶುಕ್ರವಾರ ರಾತ್ರಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಆಕಾಶವಾಣಿ ದೂರದರ್ಶನದಲ್ಲಿ ಅವರು ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿದ್ದರು. ಕ್ರಿಕೆಟ್ ಪಂದ್ಯವನ್ನು ಕಣ್ಣಿಗೆ ಕಟ್ಟುವಂತೆ ವೀಕ್ಷಕ ವಿವರಣೆ ನೀಡುತ್ತಿದ್ದರು. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಷನ್ ನ ನೋಂದಾಯಿತ ಕ್ರಿಕೆಟ್ ಅಂಪೈರ್ ಆಗಿಯೂ ಅವರು ಜನಪ್ರಿಯರಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ