ಪರಿಸರ ಸ್ನೇಹಿ ಖದರ್ ತರುವುದೇ ರಾಯಲ್ ಎನ್‌ಫೀಲ್ಡ್…?
ತುಮಕೂರು:
ಭಾರತದ ಯುವಕರ ಹಾಟ್ ಫೆವರೇಟ್ ಆಗಿರುವ ರಾಯಲ್ ಎನ್ಪೀಲ್ಡ್ ಬೈಕ್ .ಇನ್ನು ಯಾಕೆ ಎಂದರೆ ಅವುಗಳು ಮಾಡುವ ಸದ್ದು, ಅವುಗಳ ಲುಕ್, ವೈಶಿಷ್ಟ್ಯಗಳು ಹಾಗೂ ಕಾರ್ಯಕ್ಷಮತೆಯನ್ನು ಇಷ್ಟಪಡದವರೇ ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಸದ್ಯ ಪ್ರಚಂಡ ವೇಗದಲ್ಲಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಡಲು ರೆಡಿಯಗುತ್ತಿದೆ ರಾಯಲ್ ಎನ್‌ಫೀಲ್ಡ್ . ಇದಕ್ಕಾಗಿ ಹಲವು ತಿಂಗಳಿನಿಂದ ಪ್ರಯತ್ನಗಳನ್ನು ನಡೆಸುತ್ತಿದ್ದು, ತ್ವರಿತ ಪ್ರಗತಿಯನ್ನು ಕೂಡ ಸಾಧಿಸಿದೆ ಎಂದು ತಿಳಿದು ಬಂದಿದೆ. ಮುಂದಿನ 18-24 ತಿಂಗಳೊಳಗೆ ಹೊಚ್ಚ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಮೂಲಕ ಭಾರತದ ಮಾರುಕಟ್ಟೆಗೆ ಅದ್ದೂರಿಯಾಗಿ ಪ್ರವೇಶ ಮಾಡಲಿದೆ. ಬಹುತೇಕ ಯುವ ಖರೀದಿದಾರರನ್ನು ಸೆಳೆಯುವ ಸಾಧ್ಯತೆಯಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








