ಭಾರತದ ರಾಷ್ಟ್ರಗೀತೆ ವೇಳೆ ವಿರಾಟ್​ರಿಂದ ಅಸಭ್ಯ ವರ್ತನೆ

ಭಾರತ:

Virat Kohli: ಭಾರತದ ರಾಷ್ಟ್ರಗೀತೆ ವೇಳೆ ವಿರಾಟ್​ರಿಂದ ಅಸಭ್ಯ ವರ್ತನೆ: ವೈರಲ್ ಆಗುತ್ತಿದೆ ಕೊಹ್ಲಿಯ ವಿಡಿಯೋ

            ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಈ ವರ್ತನೆ ಅನೇಕರ ಕೆಂಗಣ್ಣಿಗೆ ಕಾರಣವಾಗಿದೆ. ಅಷ್ಟಕ್ಕೂ ಇವರು ಮಾಡಿದ್ದೇನು?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನೀಡಿದ ಕಳಪೆ ಪ್ರದರ್ಶನಕ್ಕೆ ಭಾರತ ಕ್ರಿಕೆಟ್ ತಂಡ  ಸಾಕಷ್ಟು ಟೀಕೆಗಳಿಗೆ ಗುರಿಯಾಗುತ್ತಿದೆ.

       ಅನೇಕರು ಈ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಟೆಸ್ಟ್ ಸರಣಿಯನ್ನು 1-2 ಅಂತರದಿಂದ ಸೋತರೆ, ಏಕದಿನ ಸರಣಿಯನ್ನು ಹೀನಾಯವಾಗಿ 0-3 ಅಂತರದಿಂದ ಸೋತು ವೈಟ್​ವಾಷ್​ ಮುಖಭಂಗಕ್ಕೆ ಒಳಗಾಯಿತು. ನಾಯಕತ್ವ ಬದಲಾವಣೆ, ರೋಹಿತ್ ಶರ್ಮಾ  ಅಲಭ್ಯ,

              ಹೊಸ ನಾಯಕ ಹೀಗೆ ಟೀಮ್ ಇಂಡಿಯಾದಲ್ಲಿನ ಮಹತ್ವದ ಬದಲಾವಣೆ ತಂಡದ ಮೇಲೆ ನೇರ ಪರಿಣಾಮ ಬೀರಿದಂತೆ ಗೋಚರಿಸುತ್ತದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಈ ಹಿಂದಿನ ರೀತಿಯ ಹುರುಪಿನಲ್ಲಿಲ್ಲ. ಇದು ಭಾರತ- ದಕ್ಷಿಣ ಆಫ್ರಿಕಾ ಮೂರನೇ ಏಕದಿನ ಪಂದ್ಯದಲ್ಲಿ ಮೇಲ್ನೋಟಕ್ಕೆ ಸರಿಯಾಗಿ ಗೋಚರವಾಯಿತು.ಕೊಹ್ಲಿಯ ಈ ವರ್ತನೆ ಅನೇಕರ ಕೆಂಗಣ್ಣಿಗೂ ಕಾರಣವಾಗಿದೆ. ಅಷ್ಟಕ್ಕೂ ವಿರಾಟ್ (Virat Kohli) ಮಾಡಿದ್ದೇನು?, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕೇಪ್​ಟೌನ್​ನ ನ್ಯೂಲೆಂಡ್ಸ್​ ಮೈದಾನದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಭಾರತ ಬೌಲಂಗ್ ಆಯ್ಕೆ ಮಾಡಿಕೊಂಡಿತು. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡದ ಆಟಗಾರರು ಮೈದಾನದಲ್ಲಿ ನಿಂತು ರಾಷ್ಟ್ರಗೀತೆಗೆ ಗೌರವಕೊಡುವುದು ವಾಡಿಕೆ. ಅದರಂತೆ ಈ ಪಂದ್ಯದಲ್ಲಿ ಕೂಡ ರಾಷ್ಟ್ರಗೀತೆಯನ್ನು ಹಾಕಲಾಯಿತು.

ಈ ಸಂದರ್ಭ ಭಾರತ ತಂಡದ ಎಲ್ಲ ಆಟಗರರು ಹಾಗೂ ಕೋಚ್, ಸಹಾಯಕ ಸಿಬ್ಬಂದಿಗಳು ತಾವುಕೂಡ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ದೇಶಕ್ಕೆ ಗೌರವ ಸಲ್ಲಿಸಿದರು.

ಭಾರತದ ರಾಷ್ಟ್ರಗೀತೆ ಪ್ರಸಾರದ ವೇಳೆ ಕ್ಯಾಮೆರಾ ಎಲ್ಲ ಟೀಮ್ ಇಂಡಿಯಾ ಆಟಗಾರರನ್ನ ತೋರಿಸುತ್ತಾ ಬಂತು. ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಕೂಡ ಕ್ಯಾಮೆರಾ ಕಣ್ಣಲ್ಲಿಸ ಸೆರೆಯಾದರು. ಆದರೆ, ಈ ಸಂದರ್ಭ ಕೊಹ್ಲಿ ರಾಷ್ಟ್ರಗೀತೆ ಹೇಳುವ ಬದಲು ಚೀವಿಂಗ್‌ ಗಮ್‌ ಜಗಿಯುತ್ತಾ ನಿಂತ್ತಿದ್ದರು. ಇದು ಲೈವ್‌ ಟೆಲಿಕಾಸ್ಟ್‌ ಕೂಡ ಆಗಿದೆ.

ಇದನ್ನು ಕಂಡ ಅನೇಕ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಕೊಹ್ಲಿ ವಿರುದ್ಧ ಕಿಡಿ ಕಾರಿದ್ದಾರೆ. ದೇಶಭಕ್ತಿಯನ್ನು ಸೂಚಿಸುವ ರಾಷ್ಟ್ರಗೀತೆ ವೇಳೆ ಚೀವಿಂಗ್‌ ಜಗಿಯುತ್ತಾ ನಿಂತಿರುವ ಈ ವ್ಯಕ್ತಿ ನಮ್ಮ ದೇಶದ ರಾಯಭಾರಿ ಎಂದು ಹೇಳಿ ಅನೇಕರು ಕಾಲೆಳೆದಿದ್ದಾರೆ. ಕೊಹ್ಲಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ವೈರಲ್ ಆಗುತ್ತಿದೆ.

ವಿರಾಟ್ ಕೊಹ್ಲಿನಾಯಕತ್ವ ತ್ಯಜಿಸಿದ ಬಳಿಕ ಅವರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಫೀಲ್ಡ್​ನಲ್ಲಿ ಅವರಿರುವ ರೀತಿ ಬಗ್ಗೆ ಅನೇಕರು ಮಾತನಾಡುತ್ತಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಆಫ್ರಿಕಾದ ನಾಯಕ ಎಂದೂ ಗಮನಿಸದೆ ಅವರನ್ನೇ ಕೊಹ್ಲಿ ತರಾಟೆಗೆ ತೆಗೆದುಕೊಂಡಿದ್ದರು.

ಪಂದ್ಯದ ಮಧ್ಯೆ ಬವುಮಾ ರನ್ ಗಳಿಸಲೆಂದು ಕ್ರೀಸ್​ ಬಿಡಲು ತಯಾರಾದಾಗ ಕೊಹ್ಲಿ ಚೆಂಡನ್ನು ವಿಕೆಟ್​ಗೆ ಥ್ರೋ ಮಾಡಿದರು. ಆದರೆ, ಚೆಂಡು ಬವುಮಾ ಅವರಿಗೆ ತಾಗುವುದರಲ್ಲಿತ್ತು. ಇದನ್ನು ಕಂಡು ಬವುಮಾ ಕೂಡ ಕೋಪಗೊಂಡರು.

ಈ ಸಂದರ್ಭ ಕೊಹ್ಲಿ ರೊಚ್ಚಿಗೆದ್ದು, “ಏನು? ನೀನು ರನ್​ ಗಳಿಸಲೆಂದು ಸ್ಟಂಪ್ ಗೆರೆ ಬಿಟ್ಟು ಮುಂದೆ ಬಂದಿದ್ದೆ, ಹಾಗಾಗಿ ನಾನು ಚೆಂಡನ್ನು ಎಸೆದೆ. ನಾನೇನು ಈಗ ನಾಯಕನಲ್ಲ, ಹೀಗಾಗಿ ನಾನು ಪಂದ್ಯ ಮುಗಿದ ನಂತರ ಯಾರಿಗೂ ಉತ್ತರವನ್ನು ನೀಡಬೇಕಾಗಿಲ್ಲ. ಆದ್ದರಿಂದ ನೀನು ನಿನ್ನ ಮಿತಿಯಲ್ಲಿರುವುದು ಒಳಿತು,” ಎಂದು ನುಡಿದಿದ್ದರು.

              ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link