ವಾಷಿಂಗ್ಟನ್:
ರಷ್ಯಾ ಹಾಗೂ ಉಕ್ರೇನ್ ಯುದ್ಧಕ್ಕೆ ಕೊನೆಗೂ ತೆರೆ ಬೀಳುವಂತೆ ಕಾಣಿಸುತ್ತಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಎರಡು ಗಂಟೆಗಳ ಸುದೀರ್ಘ ದೂರವಾಣಿ ಸಂಭಾಷಣೆಯ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಮೀಡಿಯಾದಲ್ಲಿ ರಷ್ಯಾ ಮತ್ತು ಉಕ್ರೇನ್ ತಕ್ಷಣವೇ ಕದನ ವಿರಾಮದ ಕಡೆಗೆ ಮಾತುಕತೆಗಳನ್ನು ಪ್ರಾರಂಭಿಸುತ್ತವೆ ಎಂದು ಘೋಷಿಸಿತ್ತವೆ ಎಂದು ಹೇಳಿದ್ದಾರೆ.
ಕದನ ವಿರಾಮದತ್ತ ಪ್ರಗತಿ ಸಾಧಿಸುವ ಭರವಸೆಯಲ್ಲಿ ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ. ಎರಡೂ ದೇಶಗಳ ನಾಯಕರ ನಡುವೆ ಮಾತುಕತೆ ಮಾಡಲಾಗುತ್ತದೆ, ಬೇರೆ ಯಾರಿಗೂ ತಿಳಿದಿರದ ಮಾತುಕತೆಯ ವಿವರಗಳನ್ನು ಅವರು ತಿಳಿದಿದ್ದಾರೆ ಎಂದು ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಮೂಲಕ ಮಾತುಕತೆ ನಡೆಸಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದರು. ಈ ವಿಚಾರವಾಗಿ ಇಬ್ಬರ ನಡುವೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಯಿತು. ಇದೇ ವೇಳೆ ಇಬ್ಬರೂ ಸಹ ಯುದ್ಧ ಸೂಕ್ಷ್ಮತೆಗಳ ಕುರಿತು ಚರ್ಚಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪುಟಿನ್, ಟ್ರಂಪ್ ಅವರ ಜೊತೆಗಿನ ಇಂದಿನ ಮಾತುಕತೆ ತುಂಬಾ ಉಪಯುಕ್ತವಾಗಿತ್ತು. ಮಾಸ್ಕೋ ಮತ್ತು ಕೈವ್ ನಡುವಿನ ನೇರ ಸಂವಾದವನ್ನು ಪುನರಾರಂಭಿಸಲು ಸಹಾಯ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಅಮರಿಕ ತೀವ್ರ ಹತಾಶೆಗೊಂಡಿದೆ ಎಂದು ಶ್ವೇತಭವನ ಹೇಳಿದ ನಂತರ ಈ ಮಾತುಕತೆಗಳು ನಡೆದಿವೆ. ಹೋರಾಟವನ್ನು ಕೊನೆಗೊಳಿಸುವ ಬಗ್ಗೆ ಚರ್ಚಿಸುವುದನ್ನು ಮುಂದುವರಿಸಲು ರಷ್ಯಾ ಸಿದ್ಧವಾಗಿದೆ ಎಂದು ಪುಟಿನ್ ಹೇಳಿದರು, ಆದರೆ ಟ್ರಂಪ್ ಅವರೊಂದಿಗೆ ಬಹಳ ಮಾಹಿತಿಯುಕ್ತ ಮತ್ತು ಅತ್ಯಂತ ಸ್ಪಷ್ಟವಾದ ಸಂಭಾಷಣೆ ಎಂದು ಅವರು ಕರೆದಿದ್ದರಲ್ಲಿ ಯಾವುದೇ ಪ್ರಮುಖ ಪ್ರಗತಿ ಕಂಡುಬಂದಿಲ್ಲ ಎಂದರು.
