ಅಧ್ಯಕ್ಷರ ಬದಲಾವಣೆ : ಸತೀಶ್‌ ಜಾರಕಿಹೋಳಿ ಹೇಳಿದಿಷ್ಟು ….?

ಬೆಂಗಳೂರು:

   ಆದಷ್ಟು ಶೀಘ್ರವೇ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಬೇಡಿಕೆ ಇಟ್ಟಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾತ್ರಿ ಸುರ್ಜೆವಾಲಾರನ್ನು ಭೇಟಿ ಮಾಡಿದ್ದೇನೆ. ಪಕ್ಷದ ಆಗು ಹೋಗುಗಳು ಹಾಗೂ ಸಂಘಟನೆ ಬಗ್ಗೆ ಚರ್ಚೆ ಮಾಡಿದೆ. ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂದು ಹೇಳಿದ್ದೇನೆ ಎಂದರು.

   ಸದ್ಯ ಡಿಕೆ ಶಿವಕಮಾರ್ ಅವರು ಅಧ್ಯಕ್ಷರಾಗಿದ್ದು, ಇವರನ್ನೇ ಮುಂದುವರಿಸುವುದಾದರೆ ಅದನ್ನು ಸ್ಪಷ್ಟಪಡಿಸಿ ಅಂತ ಹೇಳಿದ್ದೇನೆ. ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು. ಮತ ಸೆಳೆಯುವವರನ್ನು ಹಾಗೂ ವರ್ಚಸ್ಸು ಇರುವವರನ್ನು ಅಧ್ಯಕ್ಷರನ್ನಾಗಿ ಮಾಡಿ ಅಂತ ಹೇಳಿದ್ದೇನೆ ಎಂದರು.

   ನನ್ನನ್ನು ಅಧ್ಯಕ್ಷ ಮಾಡಿ ಅಂತ ಕೇಳಿಲ್ಲ. ಆದರೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನು ಮಾಡಿ ಎಂದು ಹೇಳಿದ್ದೇನೆ. ಇವರು ಇರಬೇಕು ಬೇಡ ಎಂಬ ಬಗ್ಗೆ ಗೊಂದಲಗಳಿವೆ. ಹೀಗಾಗಿ ಎಲ್ಲ ಗೊಂದಲ ಗಳಿಗೆ ಇತಿಶ್ರಿ ಹಾಡಿ ಎಂದು ಸುರ್ಜೆವಾಲಾಗೆ ಹೇಳಿದ್ದೇನೆ. ಡಿಕೆಶಿ ಅವರೇ ಮುಂದುವರಿಬೇಕಾ ಬೇಡ್ವಾ ಎನ್ನೋದನ್ನು ಹೈಕಮಾಂಡ್ ಹೇಳಲಿ ಎಂದರು.

  ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಇರಬೇಕಾ ಬೇಡವಾ ಎಂಬುದು ಪಕ್ಷದ ಮೇಲ್ಮಟ್ಟದಲ್ಲಿ ಚರ್ಚೆ ಆಗಬೇಕು. ಬೇರೆಯವರು ಅಧ್ಯಕ್ಷ ಆಗಬೇಕಾ ಬೇಡ್ವಾ ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿ. ನಾವೆಲ್ಲ ಇಲಾಖೆಗಳ ಮಂತ್ರಿಗಳಾದ ಮೇಲೆ ಪಕ್ಷಕ್ಕೆ ಟೈಮ್ ಕೊಡುವವರ ಸಂಖ್ಯೆ ಕಡಿಮೆ ಆಗಿದೆ ಎಂದರು ತಿಳಿಸಿದರು.

   ಪಕ್ಷದ ಸಂಘಟನೆಯ ದೃಷ್ಟಿಯಿಂದ 2023 ರಲ್ಲಿ ಇದ್ದ ವೇಗ ಕುಂಠಿತವಾಗಿದೆ. ಲೋಕಸಭೆ ಚುನಾವಣೆ ಆದಮೇಲೆ ಅಧ್ಯಕ್ಷರನ್ನು ಬದಲಾವಣೆ ಮಾಡ್ತೀವಿ ಎಂಬುದು ಎಐಸಿಸಿ ನೋಟ್ ಇದೆ. ಕೆಸಿ ವೇಣುಗೋಪಾಲ್ ಅವರೇ ಬರೆದ ನೋಟ್ ಇದೆ. ಲೋಕಸಭೆ ಚುನಾವಣೆ ಮುಗಿದು ಆರು ತಿಂಗಳ ಮೇಲಾಯಿತು. ಅದನ್ನು ಜಾರಿಗೆ ಅನುಷ್ಟಾನಕ್ಕೆ ತರಬೇಕಲ್ವಾ? ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.

Recent Articles

spot_img

Related Stories

Share via
Copy link