ಬೆಂಗಳೂರಿನಲ್ಲಿ ಯುವಕನ ಕೊಲೆ: ಶಾಹಿದ್ ಹೆಸರಿನ ಮೂವರು ಆರೋಪಿಗಳು ಪೊಲೀಸರ ವಶಕ್ಕೆ!

ಬೆಂಗಳೂರು:

ನಿನ್ನೆ ತಡರಾತ್ರಿ ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ‌ ಪಡೆದುಕೊಂಡಿದ್ದಾರೆ.

ಬೆಂಗಳೂರು: ಜಗಜೀವನರಾಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ‌ ಪಡೆದುಕೊಂಡಿದ್ದಾರೆ.

ಚಂದ್ರು ಕೊಲೆಯಾದ ದುದೈರ್ವಿ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಶಾಹಿದ್ ಎಂದು ಒಂದೇ ಹೆಸರಿಟ್ಟುಕೊಂಡ ಮೂವರನ್ನು ಪೊಲೀಸರು ವಶಕ್ಕೆ‌‌ ಪಡೆದುಕೊಂಡಿದ್ದಾರೆ.

ಐಟಿಐ ಪದವೀಧರನಾಗಿರುವ ಚಂದ್ರು ರೈಲ್ವೆ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಫಿಟ್ಟರ್ ಕೆಲಸ ಮಾಡಿಕೊಂಡಿದ್ದ. ನಿನ್ನೆ ತನ್ನ ಸ್ನೇಹಿತ ಸೈಮನ್ ಹುಟ್ಟು ಹಬ್ಬವಿತ್ತು. ಹೀಗಾಗಿ ತಡರಾತ್ರಿಯವರೆಗೂ ಪಾರ್ಟಿ ಮಾಡಿ ಊಟಕ್ಕಾಗಿ ಅಲೆದಾಡಿದ್ದಾರೆ. ತಾನಿರುವ ಛಲವಾದಿ ಪಾಳ್ಯದಲ್ಲಿ ಯಾವುದೇ ಹೊಟೇಲ್​ಗಳು ಓಪನ್ ಇರಲಿಲ್ಲ.

ಕಳಪೆ ಗುಣಮಟ್ಟ ಔಷಧಿಗಳ ಬಳಕೆ ನಿಷೇಧ

ರಂಜಾನ್ ಟೈಮ್ ಆಗಿರುವುದರಿಂದ ಜೆ.ಜೆ.ನಗರಕ್ಕೆ ಹೋದರೆ ಚಿಕನ್ ರೋಲ್​ಗಳು ಸಿಗುತ್ತದೆ ಎಂದು ಬೈಕ್​​ನಲ್ಲಿ ಸ್ನೇಹಿತ ಸೈಮನ್ ನನ್ನು ಕೂರಿಸಿಕೊಂಡು ಛಲವಾದಿ ಪಾಳ್ಯದ ಪಕ್ಕದಲ್ಲೇ ಇರುವ ಜೆಜೆ ನಗರಕ್ಕೆ ಬಂದಿದ್ದಾರೆ. ಈ ವೇಳೆ, ಅಪರಿಚಿತರ ಯುವಕರ ಬೈಕ್​ಗೆ ಚಂದ್ರುವಿನ ಬೈಕ್​ ಟಚ್ ಆಗಿದೆ. ಪರಿಣಾಮ, ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.

ಮಾತಿಗೆ ಮಾತು ಬೆಳೆದು, ನಾಲ್ವರಲ್ಲಿ ಒಬ್ಬ ಏಕಾಏಕಿ ಹರಿತವಾದ ಚಾಕು ತೆಗೆದುಕೊಂಡು ಚಂದ್ರುವಿಗೆ ಚುಚ್ಚಿದ್ದಾನೆ. ನಂತರ ಸೈಮನ್ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ಬೆಳಗಿನ ಜಾವ ಎರಡೂವರೆ ಗಂಟೆಗೆ ಈ ಘಟನೆ ನಡೆದಿದ್ದು, ಹೆಚ್ಚು ಕಮ್ಮಿ‌ ಒಂದು ಗಂಟೆಯ ಬಳಿಕ ಅಂದರೆ ಮೂರುವರೆ ಗಂಟೆಗೆ ಆಟೋದಲ್ಲಿ ಚಂದ್ರುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಯಿತು.

ಮದ್ಯ ಪ್ರಿಯರಿಗೆ ಬಿಗ್ ಶಾಕ್ : ರಾಜ್ಯದ ಬಾರ್ ಆಯಂಡ್ ರೆಸ್ಟೋರೆಂಟ್ ಗಳಲ್ಲಿ ನೋ ಸ್ಟಾಕ್, ಇಂದೂ ಸಿಗೋಲ್ಲ ಎಣ್ಣೆ!

ಆದರೆ, ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆ ಬಗ್ಗೆ ಪೊಲೀಸರು ಮುಂಜಾನೆ 4-30ಕ್ಕೆ ಪ್ರಕರಣ ದಾಖಲಿಸಿ, ಮಿಂಚಿನ ಕಾರ್ಯಾಚರಣೆ ನಡೆಸಿ‌ ಶಾಹಿದ್ ಎಂಬ ಒಂದೇ ಹೆಸರಿನ ಮೂರು ಜನ‌ ಆರೋಪಿಗಳನ್ನು ವಶಕ್ಕೆ‌ ಪಡೆದುಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap