ಸೈಫ್ ಅಲಿ ಖಾನ್​ಗೆ ಚೂರಿ ಇರಿತ ಪ್ರಕರಣ: ಶಂಕಿತ ಆರೋಪಿ ಬಂಧನ

ಮುಂಬೈ:

   ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮುಂಬೈ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.ಘಟನೆ ನಡೆದ ಸುಮಾರು 30 ಗಂಟೆಗಳ ಬಳಿಕ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

    ಆರೋಪಿಯನ್ನು ಬಾಂದ್ರಾ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆ ತಂದಿದ್ದು, ಅಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ದಾಳಿ ಮಾಡಿದರ ಹಿಂದಿನ ಉದ್ದೇಶವೇನು? ಸೈಫ್ ಮನೆ ತಲುಪಿದ್ದು ಹೇಗೆ? ಈ ದಾಳಿ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

    ಬಂಧಿತ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಬಾಂದ್ರಾ ಪೊಲೀಸ್ ಠಾಣೆಗೆ ಶಂಕಿತ ವ್ಯಕ್ತಿಯನ್ನು ಪೊಲೀಸರು ಕರೆತರುತ್ತಿರುವುದು ಕಂಡು ಬಂದಿದ್ದು, ನಟನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದ ವ್ಯಕ್ತಿ ಈತನೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.ಈ ವ್ಯಕ್ತಿಯನ್ನು ಪೊಲೀಸರಪು ಬಾಂದ್ಲಾ ರೈಲ್ವೇ ನಿಲ್ದಾಣದ ಬಳಿ ಬಂಧಿಸಿದ್ದು, ಘಟನೆ ಬಳಿಕ ತನ್ನ ಗುರ್ತಿಕೆ ಸಿಗಬಾರದು ಎಂದು ಎಂದು ಬಟ್ಟೆಯನ್ನು ಬದಲಿಸಿದ್ದ ಎಂದು ತಿಳಿದುಬಂದಿದೆ.

  ಸೈಫ್ ಅಲಿ ಖಾನ್ ಜೊತೆ ಹೊಡೆದಾಡುವಾಗ ಅವರಿಗೆ ಗಾಯವಾಗುವಂತೆ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲು ಪೊಲೀಸ್ ತಂಡಗಳು ವಸಾಯಿ ಹಾಗೂ ನಲಸೋಪಾರದ ಬಳಿಯೂ ಬೀಡು ಬಿಟ್ಟಿದ್ದವು. ಆರೋಪಿಯು ದರೋಡೆ ನಡೆಸಲು ಸೈಫ್ ಅಲಿ ಖಾನ್ ರ ಐಷಾರಾಮಿ ಬಂಗಲೆಯನ್ನು ಪ್ರವೇಶಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

   ಗುರುವಾರ ನಸುಕಿನ 2.33 ಗಂಟೆ ಸುಮಾರಿಗೆ ದುಷ್ಕರ್ಮಿ ಅಪಾರ್ಟ್​ಮೆಂಟ್​ಗೆ ನುಗ್ಗಿದ್ದ ಆರೋಪಿ, ಸೈಫ್ ಕಿರಿಯ ಪುತ್ರನಿದ್ದ ಕೊಠಡಿಗೆ ತೆರಳಿ, ಅಲ್ಲಿದ್ದ ಮನೆಗೆಲಸದವರ ಬಳಿಕ 1 ಕೋಟಿ ರೂ. ಹಣ ನೀಡದಿದ್ದರೆ ಮಗುವನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ. ಈವೇಳೆ ಕೂಗಾಟ ಕೇಳಿ ಕೊಠಡಿ ಬಳಿ ಬಂದ ಸೈಫ್ ಅವರು ಮಗನ ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ಆರೋಪಿ ಸೈಫ್ ಅವರ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ಸೈಫ್ ಅಲಿ ಖಾನ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

   ಘಟನೆ ಬೆನ್ನಲ್ಲೇ ಆರೋಪಿ ಪತ್ತೆಗೆ ಮುಂಬೈ ಪೊಲೀಸರು ಭಾರೀ ಕಾರ್ಯಾಚರಣೆಗಿಳಿದಿದ್ದರು. ಆರೋಪಿಯ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಫೋಟೋವನ್ನು ಬಿಡುಗಡೆ ಮಾಡಿದ್ದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ ವ್ಯಕ್ತಿಯೊಬ್ಬ ಬೆನ್ನ ಹಿಂದೆ ಬ್ಯಾಗ್‌ ಹಾಕಿಕೊಂಡು ಮೆಟ್ಟಿಲುಗಳ ಕೆಳಗೆ ಇಳಿಯುವುದು ಸೆರೆಯಾಗಿತ್ತು. ಫೈರ್‌ ಎಕ್ಸಿಟ್‌ ದಾರಿಯಲ್ಲಿ ಆರೋಪಿ ಕೆಳಗೆ ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಸದ್ಯ ಖಾಕಿ ವಶದಲ್ಲಿರುವ ಆರೋಪಿಯನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಕೃತ್ಯದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ.

Recent Articles

spot_img

Related Stories

Share via
Copy link