ಬೆಂಗಳೂರು
ಹುಬ್ಬಳ್ಳಿ – ಧಾರವಾಡದ ಮಧ್ಯೆ ಇರುವ ಸಂಚಾರ ಸಮಸ್ಯೆ ಬಗೆಹರಿಸಲು ಬೇಂದ್ರೆ ಸಾರಿಗೆ ಸಂಚಾರ ಬಂದ್ ಮಾಡಲೇಬೇಕು ಎಂದು ಬೆಳಗಾವಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಬೇಂದ್ರೆ ಬಸ್ ಗಳನ್ನು ಎಲ್ಲಿ ಬೇಕಾದಲ್ಲಿ ನಿಲ್ಲಿಸುವುದರಿಂದ ಟ್ರಾಫಿಕ್ ಜಾಮ್ ಆಗಿ ಸಂಚಾರ ಸಮಸ್ಯೆಯಾಗುತ್ತಿದೆ! ಎಷ್ಟು ಬಾರಿ ಸೂಚನೆ ಕೊಟ್ಟರೂ ಎಚ್ಚೆತ್ತುಕೊಳ್ಳದ ಬೇಂದ್ರೆ ಸಾರಿಗೆಯ ಹಿಂದೆ ಯಾವುದೋ ಲಾಬಿಯ ಕ್ರಪಾಕಟಾಕ್ಷವಿರುವುದಂತೂ ಸ್ಪಷ್ಟ! ಮಾನ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ, ಬಿ ಆರ್ ಟಿ ಎಸ್ ಸಾರಿಗೆ ಇದ್ದರೂ ಬೇಂದ್ರೆ ಸಾರಿಗೆಯನ್ನೇಕೆ ರದ್ದು ಮಾಡುತ್ತಿಲ್ಲ!? ಕೂಡಲೇ ಬೇಂದ್ರೆ ಸಾರಿಗೆಯನ್ನು ರದ್ದು ಮಾಡಿ, ಹುಬ್ಬಳ್ಳಿ- ಧಾರವಾಡ ನಗರದ ಮಧ್ಯೆ ಇರುವ ಸಂಚಾರ ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಆಗ್ರಹಿಸುತ್ತೇನೆ! ಎಂದಿದ್ದಾರೆ.