ಶಿರೂರು : ನದಿಯಲ್ಲಿ ಟ್ರಕ್‌ ಅವಶೇಷ ಪತ್ತೆ….!

ಕಾರವಾರ:

    ಕಾರವಾರ ಜಿಲ್ಲೆ ಶಿರೂರಿನಲ್ಲಿ ಭೂಕುಸಿತ ಸಂಭವಿಸಿ 29 ದಿನಗಳು ಕಳೆದಿದ್ದು, ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಮೂವರ ಪತ್ತೆ ಮಾಡಲು ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ.

   ಕಾರವಾರ ಶಾಸಕ ಸತೀಶ್ ಸೈಲ್ ಸೂಚನೆ ಮೇರೆಗೆ ಇದೀಗ ಮತ್ತೆ ಶೋಧ ಕಾರ್ಯ ಆರಂಭವಾಗಿದ್ದು, ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಗಂಗಾವಳಿ ನದಿಯಲ್ಲಿ ಪರಿಶೀಲಿಸಿದಾಗ ಗ್ಯಾಸ್ ಟ್ಯಾಂಕರ್‌ನ ಸ್ವಲ್ಪ ಭಾಗ ಪತ್ತೆಯಾಗಿದೆ. ಕೇರಳದ ಚಾಲಕ ಅರ್ಜುನ್ ಎಂಬಾತನಿಗೆ ಸೇರಿದ್ದ ಲಾರಿಯನ್ನು ಹೊರ ತೆಗೆಯಲಾಗಿತ್ತು. ಕೇರಳ ಮೂಲದ ಅರ್ಜುನ್, ಶಿರೂರಿನ ಜಗನ್ನಾಥ, ಗಂಗೆಕೊಳ್ಳದ ಲೋಕೇಶ್ ಅವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ, ಆದರೆ ಲಾರಿ ಭಾಗಗಳು ಪತ್ತೆಯಾಗಿರುವುದು ಶೋಧ ತಂಡಕ್ಕೆ ಹೊಸ ಭರವಸೆ ಮೂಡಿಸಿದೆ. ತಂಡವು ಗಂಗಾವಳಿ ನದಿಯ ಮಧ್ಯದಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಲಿದೆ.

   ನಾಪತ್ತೆಯಾದವರ ಪತ್ತೆಗೆ ಒತ್ತಡ ಹೆಚ್ಚಿದ್ದು, ಭರವಸೆಯಂತೆ ಜಿಲ್ಲಾಡಳಿತ ಮತ್ತೆ ಶೋಧ ಕಾರ್ಯ ಆರಂಭಿಸಿದೆ. ಅದರಂತೆ ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಮತ್ತು ಭಾರತೀಯ ನೌಕಾಪಡೆ ಜಂಟಿಯಾಗಿ ಶೋಧ ಕಾರ್ಯದಲ್ಲಿ ಭಾಗಿಯಾಗಲಿವೆ. ನೌಕಾಪಡೆಯ ಅಧಿಕಾರಿಗಳು ರಾಡಾರ್ ಮತ್ತು ಇತರ ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು ಶೋಧ ಕಾರ್ಯಾಚರಣೆಯನ್ನು ನಡೆಸಿದರೆ, ಡೈವರ್‌ಗಳು ನಾಪತ್ತೆಯಾದ ಮೂವರಿಗಾಗಿ ನೀರೊಳಗೆ ಮುಳುಗಿ ಶೋಧ ನಡೆಸಲಿದ್ದಾರೆ. ಜಿಲ್ಲಾಡಳಿತದ ಪ್ರಕಾರ ಭೂಕುಸಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ, ಆದರೆ ಇದುವರೆಗೆ 8 ಶವಗಳು ಮಾತ್ರ ಪತ್ತೆಯಾಗಿವೆ. ಕೇರಳ ಸರ್ಕಾರ ಮತ್ತು ಮಾಧ್ಯಮಗಳು ಶೋಧ ಕಾರ್ಯಾಚರಣೆಗೆ ಮುಂದಾಗುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿವೆ.

Recent Articles

spot_img

Related Stories

Share via
Copy link
Powered by Social Snap