ಶಿರಸಿ:
ಮಳೆ ಮಾಪನದಿಂದ ಆಗಿರುವ ದೋಷದಿಂದ ಈ ಬೆಳೆವಿಮೆ ವಿಳಂಬವಾಗಿದೆ. ಆದರೆ ಇನ್ನೆರಡು ತಿಂಗಳಲ್ಲಿ ರೈತರ ಖಾತೆಗೆ ಬೆಳೆವಿಮೆ ಜಮೆಯಾಗಲಿದೆ ಎಂದು ಶಾಸಕ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದರು.ಅವರು ಇಂದು ಬ್ಯಾಂಕಿನ ಆವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಮಾ ಕಂಪನಿ ಯವರು ತಾವು ಹಣ ನೀಡದೇ ಇರುವುದಕ್ಕೆ ಕಾರಣ ಹುಡುಕುತ್ತಿರುತ್ತಾರೆ. ಆದರೆ ನಾನು ಈ ವಿಷಯ ವಾಗಿ ಸಿಎಂ ಜತೆಗೆ ಮಾತನಾಡಿದ್ದೇನೆ ಎಂದರು.ಕಳೆದವಾರ ರೈತರು , ವಿಮಾ ಕಂಪನಿ ಹಾಗೂ ತೋಟಗಾರಿಕಾ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು.
