IPS ಅಧಿಕಾರಿ ಸೂಟ್ ಕೇಸ್ ಪರಿಶೀಲಿಸಿದ ಏರ್ ಪೋರ್ಟ್ ಸಿಬ್ಬಂದಿಗೆ ಶಾಕ್..! ಯಾಕೆ ಗೊತ್ತಾ..?

ಜೈಪುರ:

ಏರ್‌ಪೋರ್ಟ್‌ ಚೆಕ್ಕಿಂಗ್ ವೇಳೆ ಐಪಿಎಸ್ ಅಧಿಕಾರಿಯ ಸೂಟ್‍ಕೇಸ್ ತುಂಬಾ ಹಸಿರು ಬಟಾಣಿ ಪತ್ತೆಯಾಗಿವೆ. ಈ ಫೋಟೋ ವನ್ನು ಸ್ವತಃ ಐಪಿಎಸ್ ಅಧಿಕಾರಿಯೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಒಡಿಶಾ ಹಿರಿಯ ಐಪಿಎಸ್ ಅಧಿಕಾರಿ ಅರುಣ ಬೋತ್ರಾ ಅವರ ಬ್ಯಾಗ್‌ನ್ನು ಏರ್‌ಪೋರ್ಟ್‌ನಲ್ಲಿ ತಪಾಸಣೆ ಮಾಡಲಾಗಿದೆ.ಈ ವೇಳೆ ಜೈಪುರದ ಏರ್‌ಪೋರ್ಟ್‌ನಲ್ಲಿ ಐಪಿಎಸ್ ಅಧಿಕಾರಿಯ ಸೂಟ್‍ಕೇಸ್ ತುಂಬಾ ಹಸಿರು ಬಟಾಣಿ ಸಿಕ್ಕಿದೆ.

ಉಕ್ರೇನ್​ನಿಂದ 22,500 ಮಂದಿಯನ್ನು ಸುರಕ್ಷಿತವಾಗಿ ಕರೆತರುವುದರ ಜೊತೆಗೆ ಇತರೆ 18 ದೇಶಗಳಿಗೂ ಸಹಾಯ ಮಾಡಿದೆ ಭಾರತ

ಏರ್‌ಪೋರ್ಟ್‌ ಸೆಕ್ಯೂರಿಟಿ ಅಧಿಕಾರಿಗಳನ್ನು ನನ್ನ ಸೂಟ್‍ಕೇಸನ್ನು ತೆರೆಯಲು ಹೇಳಿದ್ದಾರೆ ಎಂದು ಅರುಣ ಭೊತ್ರಾ ಫೋಟೋವನ್ನು ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗಿದ್ದು, ಹಲವು ಐಪಿಎಸ್ ಅಧಿಕಾರಿಗಳು ತಮ್ಮದೇ ಪ್ರತಿಕ್ರಿ ಯೇ ನೀಡಿ ಟ್ವೀಟ್ ಮಾಡುತ್ತಿದ್ದಾರೆ.

ಬಯಲುಸೀಮೆಯ ಬಂಗಾರದ ಬೆಳೆ ಹುಣಸೆ ಬಗ್ಗೆ ಸರ್ಕಾರದ ನಿರ್ಲಕ್ಷ್ಯ

ಅಧಿಕಾರಿಯ ಸೂಟ್‍ಕೇಸ್‍ನಲ್ಲಿ 40ಕೆಜಿ ಹಸಿ ಹಸಿರು ಬಟಾಣಿ ಪತ್ತೆಯಾಗಿದೆ. ಆದರೆ ನಿಜವಾಗಲೂ ಏರ್‌ಪೋರ್ಟ್‌ನಲ್ಲಿ ಇಂತಹ ಘಟನೆ ನಡೆದಿದೆಯಾ ಅಥವಾ ಅಧಿಕಾರಿ ಹಾಸ್ಯ ಮಾಡಲು ಇಂತಹ ಟ್ವೀಟ್ ಮಾಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link