ಶಿರಸಿ:
ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯ ಕಾಳಂಗಿ ಗ್ರಾಮದ ಸ ನಂ 87 ರ ಸವಿತಾ ಈರಪ್ಪ ಕಮ್ಮಾರ ಅವರಿಗೆ ಸೇರಿದ ಒಂದು ಎಕರೆ ಶುಂಠಿ ಬೆಳೆಗೆ ಯಾರೋ ಕಿಡಿಗೇಡಿಗಳು ಕಳೆನಾಶಕ ಸಿಂಪಡಿಸಿದ ಘಟನೆ ನಡೆದಿದೆ.ಈ ಬಡ ಕುಟುಂಬವು 2 – 3 ಲಕ್ಷ ರೂಪಾಯಿ ಹಣ ವ್ಯಯಿಸಿ ಶುಂಠಿ ಬೆಳೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.ತುಂಬಾ ಹುಲುಸಾಗಿ ಬೆಳೆದ ಬೆಳೆಯನ್ನು ಕಂಡು ಸಹಿಸಲಾರದೆ ಯಾರೋ ದುಷ್ಕರ್ಮಿಗಳು ಕಳೆನಾಶಕ ಸಿಂಪಡಿಸಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಇದರಿಂದ ಈ ಬಡ ರೈತ ಕುಟುಂಬಕ್ಕೆ ದಿಕ್ಕು ತೋಚದಂತಾಗಿದ್ದುಅಂದಾಜು 5 – 6 ಲಕ್ಷ ರೂಪಾಯಿ ಶುಂಠಿ ಬೆಳೆ ನಾಶವಾಗಿದೆ ಎನ್ನಲಾಗುತ್ತಿದೆ.ಸಂಬಂಧಪಟ್ಟ ಅಧಿಕಾರಿಗಳು ಬೆಳೆ ನಾಶಪಡಿಸಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಬಡ ರೈತ ಕುಟುಂಬಕ್ಕೆ ನ್ಯಾಯವನ್ನು ದೊರಕಿಸಿ ಕೊಡಬೇಕಾಗಿದೆ.








