ಶಿರಾ :
ನಗರದ ದೊಡ್ಡಕೆರೆಯಿಂದ ಕಲ್ಲುಕೋಟೆಗೆ ಸೇರುವ ಮಧ್ಯಭಾಗದ ಹಳ್ಳದ ಸಂಪರ್ಕ ಸೇತುವೆಯೊಂದು ಕೊಚ್ಚಿ ಹೋಗಿ 10 ದಿನಗಳಾದರೂ ಯಾವ ಅಧಿಕಾರಿಗಳೂ ಇತ್ತ ಭೇಟಿ ನೀಡಿ ಇದರ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ನಗರಸಭೆಯ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕೋಟೆ ಲೋಕೇಶ್ ಆರೋಪಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಶಿರಾ ದೊಡ್ಡ ಕೆರೆಯು ಕೋಡಿ ಬಿದ್ದು ನೀರು ಹೊರ ಬಂದ ಪರಿಣಾಮ ನೀರಿನ ರಭಸಕ್ಕೆ ಲಿಂಗದಹಳ್ಳಿ ಮದಲೂರು ಸಂಪರ್ಕ ಕಲ್ಪಿಸುತ್ತಿದ್ದ ಹಳ್ಳದ ಮೇಲಿನ ಸೇತುವೆಯೊಂದು ಕೊಚ್ಚಿ ಹೋಗಿದೆ. ಈ ಸಂಬಂಧ ಸಣ್ಣ ನೀರಾವರಿ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಸೇತುವೆ ದುರಸ್ತಿಗೊಳಿಸುವಂತೆ ಲೋಕೇಶ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
