ಬರಗೂರು :
ಅಶೋಕಾ ಲೈಲಾಂಡ್ ಟಾಟಾ ಎಸ್ ವಾಹನವೊಂದು ಆಕಸ್ಮಿಕವಾಗಿ ಮುಗುಚಿ ಬಿದ್ದು ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟು 9 ಮಂದಿಗೆ ತೀರ್ವ ರೀತಿಯಲ್ಲಿ ಪೆಟ್ಟು ಬಿದ್ದು ಹೆಚ್ಚಿನ ಚಿಕಿತ್ಸೆಗೆ ಶಿರಾ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಬಡೇನಹಳ್ಳಿ ಗೇಟ್ ಬಳಿ ಭಾನುವಾರ ರಾತ್ರಿ 7ರ ವೇಳೆ ಜರುಗಿದೆ.
ಮೃತನನ್ನು ಪಾವಗಡ ತಾಲೂಕಿನ ಉದ್ದಗಟ್ಟೆ ಗ್ರಾಮದ ಉಗ್ರಪ್ಪ ಸ್ಥಳದಲ್ಲೇ ಮೃಪಟ್ಟಿದ್ದು ಕರೇಕ್ಯಾತನಹಳ್ಳಿ ಗ್ರಾಮ ವಾಸಿ ರಮೇಶ್ ಎಂಬ ವ್ಯಕ್ತಿ ಶಿರಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಟಾಟಾ ಎಸಿಯಲ್ಲಿ ಬರುತ್ತಿದ್ದ ಒಟ್ಟ11ಮಂದಿಯಲ್ಲಿ ಇಬ್ಬರು ಮೃತಪಟ್ಟಿದ್ದು 9ಮಂದಿಯನ್ನು ಶಿರಾ ಆಸ್ಪತ್ರೆಗೆ ಧಾಖಲಿಸಲಾಗಿದೆ ಇವರು ಶಿರಾ ಕಡೆಯಿಂದ ಹುಣಸೇ ಹಣ್ಣು ತುಂಬಿಕೊಂಡು ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದರು.
ಸ್ಥಳಕ್ಕೆ ಬೇಟಿ ನೀಡಿದ ಪಟ್ಟನಾಯಕನಹಳ್ಳಿ ಪಿಎಸ್‍ಐ ಭಾಸ್ಕರ್,ಶಿರಾ ಪಿಎಸ್‍ಐ ಹನುಮಂತಪ್ಪ,ಬರಗೂರು ಪೋಲೀಸ್ ಎ.ಎಸ್.ಐ ಮುದ್ದರಂಗಪ್ಪ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ