ಶಿರಾ :
ಅನಗತ್ಯವಾಗಿ ಕಾರಣಗಳನ್ನು ನೀಡಿ ಲಾಕ್‍ಡೌನ್ ಜಾರಿಯ ಕಟ್ಟು ನಿಟ್ಟಿನ ಅವಧಿ ಜಾರಿಯಾದರೂ ಬೈಕ್‍ಗಳಲ್ಲಿ ಓಡಾಡುತ್ತಿದ್ದ ಸಾರ್ವಜನಿಕರಿಗೆ ಸೋಮವಾರ ನಗರದ ಪೊಲೀಸರು ಲಾಠಿ ರುಚಿ ತೋರಿಸಿ ಬೈಕ್‍ಗಳನ್ನೂ ಸೀಜ್ ಮಾಡಿದರು.
ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಕೊಳ್ಳಲು ಸಮಯಾವಕಾಶವಿತ್ತಾದರೂ ನಿಗದಿಯ ಅವಧಿಯನ್ನೂ ಮೀರಿ ಬಹುತೇಕ ಮಂದಿ ಅನಗತ್ಯ ಓಡಾಟ ನಡೆಸಿದ ಪರಿಣಾಮ ಆರಕ್ಷಕರು ಕಟ್ಟುನಿಟ್ಟಿನ ಕ್ರಮ ಕೈಗೊಂಡರು.
ಕುಡಿಯುವ ನೀರು, ಔಷಧಿ ಅಂಗಡಿಗಳ ನೆಪದಲ್ಲೂ ಕೆಲವರು ಓಡಾಡುತ್ತಿದ್ದರಾದರೂ, ಔಷಧಿಗಳನ್ನು ತರಲು ಬಂದ ಕೆಲವರು ಕೂಡ ಬೈಕ್ ಸೀಜ್ ಬಿಸಿ ಮುಟ್ಟಿಸಿ ಕೊಳ್ಳುವಂತಾಯಿತು.
ದಿನಸಿ ಅಂಗಡಿಗಳಿಗೆ 10 ಗಂಟೆಯವರೆಗೆ ಅವಕಾಶ ಇದ್ದಿತಾದರೂ, ಆ ನಂತರದ ಅವಧಿಯಲ್ಲಿ ಇಡೀ ನಗರದ ಎಲ್ಲಾ ಅಂಗಡಿಗಳು ಮುಚ್ಚಲ್ಪಟ್ಟು ಆರಕ್ಷಕರ ಕಟ್ಟುನಿಟ್ಟಿನ ಕ್ರಮದಿಂದಾಗಿ ಮೊದಲ ದಿನದ ಲಾಕ್‍ಡೌನ್ ಯಶಸ್ಸು ಕಂಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
