ಕಾವ್ಯಾ ದಾಸರ ಮತ್ತು ಅಂಬಿಕಾ ದಾಸರ ಅವರಿಗೆ ಶ್ರೀನಿವಾಸ್ ಮಾನೆ ಅವರಿಂದ ಸನ್ಮಾನ

ಹಾನಗಲ್ಲ :

       ಶ್ರೀಲಂಕಾದ ಕೊಲಂಬೊದಲ್ಲಿ ಇತ್ತೀಚಿಗೆ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಜ್ಯೂನಿಯರ್ ವಾಲಿಬಾಲ್ ಟೂರ್ನಿಯಲ್ಲಿ ಭಾರತ ತಂಡ ಪ್ರತಿನಿಧಿಸಿ ಚಿನ್ನದ ಪದಕ ಗಳಿಸುವ ಮೂಲಕ ಹಾನಗಲ್ ತಾಲೂಕಿಗೆ ಕೀರ್ತಿ ತಂದಿರುವ ಅಕ್ಕಿಆಲೂರಿನ ಸಹೋದರಿಯರಾದ ಕಾವ್ಯಾ ದಾಸರ ಮತ್ತು ಅಂಬಿಕಾ ದಾಸರ ಅವರನ್ನು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ ಸನ್ಮಾನಿಸಿದರು.

       ಹಾನಗಲ್ಲ ತಾಲೂಕು ಅಕ್ಕಿಆಲೂರಿನ ಕಮಾಟಿ ಓಣಿಯಲ್ಲಿನ ಈ ಸಹೋದರಿಯರ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಬಳಿಕ ಮಾತನಾಡಿದ ಶ್ರೀನಿವಾಸ್ ಮಾನೆ, ಇಂದಿನ ಬದಲಾದ ದಿನಮಾನಗಳಲ್ಲಿ ಕ್ರೀಡೆಗಳ ಬಗೆಗೆ ವಿದ್ಯಾರ್ಥಿ ಹಾಗೂ ಯುವ ಸಮುದಾಯ ಆಸಕ್ತಿ ಕಳೆದುಕೊಂಡಿದೆ. ಮೊಬೈಲ್, ಅಂತರ್ಜಾಲ ಸೇರಿದಂತೆ ಇತರೆಡೆ ಹೆಚ್ಚು ಸಮಯ ಹರಣ ಮಾಡಲಾಗುತ್ತಿದ್ದು, ಕ್ರೀಡೆಗಳನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಕ್ರೀಡೆ ಸಹಕಾರಿಯಾಗಿವೆ ಎಂದು ಹೇಳಿದ ಅವರು, ವಿದ್ಯಾರ್ಥಿನಿಯರಾದ ಕಾವ್ಯಾ ಮತ್ತು ಅಂಬಿಕಾ ಅಂತರರಾಷ್ಟ್ರೀಯ ಜ್ಯೂನಿಯರ್ ವಾಲಿಬಾಲ್ ಟೂರ್ನಿಯಲ್ಲಿ ಭಾರತ ತಂಡ ಪ್ರತಿನಿಧಿಸಿ ಚಿನ್ನದ ಪದಕ ಗಳಿಸುವುದರೊಂದಿಗೆ ಹಾನಗಲ್ ತಾಲೂಕಿಗೆ ಗೌರವ ತಂದಿದ್ದಾರೆ. ಭವಿಷ್ಯದಲ್ಲಿ ಈ ವಿದ್ಯಾರ್ಥಿನಿಯರು ಸಿನಿಯರ್ ಭಾರತ ತಂಡ ಪ್ರತಿನಿಧಿಸಲಿ ಎಂದು ಶುಭ ಹಾರೈಸಿದರು.

       ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಜಿಪಂ ಸದಸ್ಯ ಟಾಕನಗೌಡ ಪಾಟೀಲ, ತಾಪಂ ಸದಸ್ಯ ಬಷೀರಖಾನ್ ಪಠಾಣ, ಮಾಜಿ ಉಪಾಧ್ಯಕ್ಷೆ ಅನಿತಾ ಶಿವೂರ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ವಕ್ತಾರ ಯಾಸೀರ್‍ಅರಾಫತ್ ಮಕಾನದಾರ, ಮುಖಂಡರಾದ ಉಮೇಶ ಗೌಳಿ, ಖ್ವಾಜಾಮೊಹಿದ್ದೀನ್ ಅಣ್ಣಿಗೇರಿ, ಭರಮಣ್ಣ ಶಿವೂರ, ಇಂದೂಧರ ಸಾಲಿಮಠ, ರಜಿಯಾಬೇಗಂ ಹಿತ್ತಲಮನಿ, ಗೀತಾ ಪೂಜಾರ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link