ಮಲಬಾರ್ ಶೋರೂಂ ಉದ್ಘಾಟಿಸಿದ ರೋರಿಂಗ್ ಸ್ಟಾರ್ ಶ್ರೀಮುರಳಿ

ಚಿಕ್ಕಮಗಳೂರು:

       ವಿಶ್ವದ ಟಾಪ್ 5 ಆಭರಣಗಳ ಬ್ರ್ಯಾಂಡ್‍ನಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಕರ್ನಾಟಕದಲ್ಲಿ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡುತ್ತಿದ್ದು, ಚಿಕ್ಕಮಗಳೂರಿನಲ್ಲಿ ತನ್ನ ಹೊಸ ಮಳಿಗೆಯನ್ನು ಆರಂಭಿಸಿದೆ. ಈ ಹೊಸ ಶೋರೂಂ ಅನ್ನು ಕನ್ನಡದ ಹೆಸರಾಂತ ಚಿತ್ರನಟ ಶ್ರೀಮುರಳಿ ಅವರು ಉದ್ಘಾಟಿಸಿದರು, ಇದೇ ಸಂದರ್ಭದಲ್ಲಿ ಚಿಕ್ಕಮಗಳೂರಿನ ಶಾಸಕರಾದ ಸಿ.ಟಿ.ರವಿ, ಮಲಬಾರ್ ಗ್ರೂಪ್‍ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮಜೀದ್, ಜೋನಲ್ ಹೆಡ್-ಕರ್ನಾಟಕ ಫಿಲ್ಸರ್ ಬಾಬು, ಹಲವಾರು ಗಣ್ಯರು ಹಾಗೂ ಮಲಬಾರ್ ಗ್ರೂಪ್‍ನ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಹೊಸ ಮಳಿಗೆ ಚಿಕ್ಕಮಗಳೂರಿನ, ಕೆ.ಎಂ ರಸ್ತೆ, ಸೈಂಟ್ ಜೋಸೆಫ್ ಕಾನ್ವೆಂಟ್ ಎದುರು, ತೊಗರಿ ಹಂಕಲ್ ವೃತ್ತದ ಹತ್ತಿರ ಇದೆ, ಇಲ್ಲಿ ಚಿನ್ನ, ವಜ್ರ, ಹರಳು ಮತ್ತು ಪ್ಲಾಟಿನಂನ ಹೊಸ ಹೊಸ ಸಂಗ್ರಹಗಳು ಇವೆ.

       ಬಿಐಎಸ್ ಹಾಲ್‍ಮಾರ್ಕ್‍ನ ಚಿನ್ನಾಭರಣಗಳು, ಐಜಿಐ, ಜಿಐಎ ಪ್ರಮಾಣೀಕೃತ ವಜ್ರ ಮತ್ತು ಪಿಜಿಐ ಪ್ರಮಾಣೀಕೃತ ಪ್ಲಾಟಿನಂನ ಇತ್ತೀಚಿನ ಹೊಸ ವಿನ್ಯಾಸಗಳ ಆಭರಣಗಳ ಸಂಗ್ರಹ ಈ ಶೋರೂಂನಲ್ಲಿದೆ.

         ಈ ಮೂಲಕ ಚಿಕ್ಕಮಗಳೂರಿನ ಆಭರಣ ಪ್ರಿಯರಿಗೆ ಇಷ್ಟವಾಗುವ ಚಿನ್ನ ಮತ್ತು ವಜ್ರಾಭರಣಗಳನ್ನು ಪ್ರದರ್ಶಿಸಲಾಗುತ್ತಿದೆ. ಆಭರಣಗಳಲ್ಲದೇ ಕರ್ನಾಟಕದ ಸಂಸ್ಕತಿಯನ್ನು ಬಿಂಬಿಸುವ ಚಿನ್ನಾಭರಣಗಳೂ ಗ್ರಾಹಕರನ್ನು ಆಕರ್ಷಿಸಲಿವೆ. ಮೈನ್ ವಜ್ರಾಭರಣಗಳು, ಎರಾ-ಅನ್‍ಕಟ್ ವಜ್ರಾಭರಣಗಳು, ಡಿವೈನ್ – ಭಾರತೀಯ ಪಾರಂಪರಿಕ ಆಭರಣಗಳು, ಎತಿನಿಕ್ಸ್ – ಕರಕುಶಲ ವಿನ್ಯಾಸಿತ ಆಭರಣಗಳು, ಪ್ರೆಶಿಯಾ-ಅಮೂಲ್ಯ ರತ್ನಾಭರಣಗಳು, ಸ್ಟಾರ್‍ಲೆಟ್ – ಮಕ್ಕಳ ಆಭರಣಗಳು ಮತ್ತು ಹಾಯ್-ಕ್ಯಾಷುವಲ್ ಜ್ಯುವೆಲ್ಲರಿಯಂತಹ ಸಬ್‍ಬ್ರ್ಯಾಂಡ್‍ಗಳೂ ಸಹ ಈ ಶೋರೂಂನಲ್ಲಿ ಲಭ್ಯವಿದೆ.

        ಜೀವನಪರ್ಯಂತ ಉಚಿತ ನಿರ್ವಹಣೆ, ಒಂದು ವರ್ಷದ ಉಚಿತ ವಿಮೆ ಮತ್ತು ಮರುಖರೀದಿಯ ಗ್ಯಾರಂಟಿಯನ್ನು ಎಲ್ಲಾ ಆಭರಗಳಿಗೆ ನೀಡುವ ಮೂಲಕ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳನ್ನು ನೀಡಲಿದೆ.

        ಸಂಭ್ರಮಿಸಿ ವಿಶೇಷ ಉದ್ಘಾಟನಾ ಕೊಡುಗೆಯೊಂದಿಗೆ, 100 ರೂ. ಕಡಿತ ಪ್ರತೀ ಗ್ರಾಂ ಚಿನ್ನಾಭರಣಗಳಿಗೆ, 10% ಕಡಿತ ಎಲ್ಲಾ ವಜ್ರದ ಮೌಲ್ಯದ ಮೇಲೆ. ಈ ಆಫರ್ 15 ಜನವರಿ 2019 ರ ವರಗೆ ಮಾತ್ರ ಮಲಬಾರ್ ಗ್ರೂಪ್ ಕುರಿತು ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್, ತಮ್ಮ ಸಂಪೂರ್ಣ ಸ್ವಾಮ್ಯದ ಉಪಸಂಸ್ಥೆ ಮಲಬಾರ್ ಡೆವಲಪರ್ಸ್ ಮೂಲಕ ರಿಯಲ್ ಎಸ್ಟೇಟ್ ಸಹ ಸೇರಿದಂತೆ, ವಿವಿಧ ವ್ಯವಹಾರ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ರೂ.30,000 ಕೋಟಿಯ ಮಲಬಾರ್ ಗ್ರೂಪ್ ಕಂಪೆನಿಗಳ ಒಂದು ಅಂಗವಾಗಿದೆ. 1993 ರಲ್ಲಿ ಒಂದೇ ಅಂಗಡಿಯ ವ್ಯವಹಾರ ಸಂಸ್ಥೆಯೊಂದು ಕೇರಳದಲ್ಲಿ ಸ್ಥಾಪಿಸಲ್ಪಟ್ಟ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ತಮ್ಮ ಗುಣಮಟ್ಟ ಮತ್ತು ಪರಿಶುದ್ಧತೆಯ ಮೇಲೆ ರಾಜಿಯಾಗದ ನಿಲುವಿನಿಂದ ಭಾರತದಲ್ಲಿ ಅತೀ ಶೀಘ್ರವಾಗಿ ಬೆಳೆಯುತ್ತಿರುವ ಗೋಲ್ಡ್ ರಿಟೇಲ್ ಚೈನ್‍ಗಳಲ್ಲೊಂದಾಗಿದೆ.

          ಭಾರತವಲ್ಲದೆ, ಜಿಸಿಸಿ ರಾಷ್ಟ್ರಗಳಾದ ಯುಎಇ, ಒಮನ್, ಸೌದಿ ಅರೇಬಿಯಾ, ಕತಾರ್, ಕುವೈತ್, ಬಹರಿನ್ ಮುಂತಾದ ವಿದೇಶಿ ಮಾರುಕಟ್ಟೆಯಲ್ಲೂ ಹಾಗೂ ಸೌತ್ ಈಸ್ಟ್ ಏಶಿಯನ್ ರಾಷ್ಟ್ರಗಳಾದ ಸಿಂಗಪೂರ್ ಮತ್ತು ಮಲೇಶಿಯಾಗಳಲ್ಲೂ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ವ್ಯವಹಾರ ನಡೆಸುತ್ತಿದ್ದಾರೆ. ವಿಶ್ವದಾದ್ಯಂತ 250 ಶೋರೂಂಗಳಿದ್ದು, ಭಾರತದಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ದೆಹಲಿ, ಹರ್ಯಾಣ, ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸರವರ ಶೊರೂಂಗಳಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap