ತುಮಕೂರು:ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ ಪಡೆದ್ರಾ 3.5ಕೋಟಿ!!?

ತುಮಕೂರು :

      ಮೈತ್ರಿ ಅಭ್ಯರ್ಥಿ ವಿರುದ್ಧ ಬಂಡಾಯ ಎದ್ದಿದ್ದ ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ರಾಜಣ್ಣ ನಾಮಪತ್ರ ವಾಪಸ್ ಪಡೆಯಲು ತಲಾ 3.5 ಕೋಟಿ ರೂ.ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿರುವ ಆಡಿಯೋ ವೈರಲ್ ಆಗಿದೆ.

‘ಯಾರಿಂದಲೂ ಹಣ ಪಡೆದಿಲ್ಲ’- ಧರ್ಮಸ್ಥಳದಲ್ಲಿ ಮುದ್ದಹನುಮೇಗೌಡ ಪ್ರಮಾಣ!

      ಡಿಸಿಎಂ ಪರಮೇಶ್ವರ್ ಆಪ್ತ ತುಮಕೂರು ಕಾಂಗ್ರೆಸ್ ಘಟಕದ ಸಾಮಾಜಿಕ ಜಾಲತಾಣದ ಸಂಚಾಲಕ ದರ್ಶನ್ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ನಡುವೆ ಸಂಭಾಷಣೆ ನಡೆದಿದೆ ಎನ್ನಲಾದ ಆಡಿಯೋದಲ್ಲಿ ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ ಮತ್ತು ಕೆ.ಎನ್. ರಾಜಣ್ಣ ಅವರಿಗೆ ತಲಾ 3.5 ಕೋಟಿ ರೂ. ನೀಡಲಾಗಿದೆ. ಆದರೂ ಅವರು ಪ್ರಚಾರಕ್ಕೆ ಬರುತ್ತಿಲ್ಲ ಎಂದು ದರ್ಶನ್ ಕಾಂಗ್ರೆಸ್ ಕಾರ್ಯಕರ್ತನಿಗೆ ಹೇಳಿರುವ ಅಂಶ ಆಡಿಯೋದಲ್ಲಿ ದಾಖಲಾಗಿದೆ.

      ಜೆಡಿಎಸ್​ ವರಿಷ್ಠ ಮತ್ತು ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ದೇವೇಗೌಡರು ಸ್ಪರ್ಧೆ ಮಾಡುವುದಾಗಿ ಘೋಷಿಸುತ್ತಿದ್ದಂತೆ ಮುದ್ದಹನುಮೇಗೌಡರು ತಮ್ಮ ಅಸಮಾಧಾನ ಹೊರಹಾಕಿದ್ದರು ಮತ್ತು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ರಾಜಣ್ಣ ಸಹ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆ ನಂತರ ಪಕ್ಷದ ವರಿಷ್ಠರ ಮನವೊಲಿಕೆಯ ನಂತರ ಇಬ್ಬರೂ ತಮ್ಮ ನಾಮಪತ್ರ ವಾಪಸ್​ ಪಡೆದಿದ್ದರು.

     ದೇವೇಗೌಡರು ಗೆದ್ದರೆ ಡಿಸಿಎಂ ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುತ್ತಾರೆ. ಸಚಿವ ರೇವಣ್ಣ ಡಿಸಿಎಂ ಆಗುತ್ತಾರೆ. ಸಿಎಂ ಕುಮಾರಸ್ವಾಮಿ ಅವರು ಆರೋಗ್ಯ ಸಮಸ್ಯೆಯಿಂದ ವಿಶ್ರಾಂತಿಯಲ್ಲಿ ಇರಲಿದ್ದಾರೆ ಎಂದೆಲ್ಲ ದರ್ಶನ್ ಮಾತನಾಡಿದ್ದಾರೆ. ಜೊತೆಗೆ ದೇವೇಗೌಡರು ಸೋತರೆ ರಾಜಣ್ಣ ಮತ್ತು ಮುದ್ದಹನುಮೇಗೌಡರು ಪಕ್ಷದಿಂದ ಅಮಾನತು ಆಗ್ತಾರೆ ಎಂದು ಸಂಭಾಷಣೆ ನಡೆಸಿದ್ದಾರೆ.

ಡಿಸಿಎಂ ಪರಂ ಬೆಂಬಲಿಗನ ಮೇಲೆ ಹಲ್ಲೆ

      ಈ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಮತ್ತೊಂದು ವಿವಾದಕ್ಕೆ ದರ್ಶನ್ ಸಿಲುಕಿಕೊಂಡಿದ್ದಾರೆ. ಇವರು ಗುರುವಾರವಷ್ಟೇ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿ ಜಾರಕಿಹೊಳಿ ಬೆಂಬಲಿಗರಿಂದ ಥಳಿಸಿಕೊಂಡಿದ್ದು, ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link