ಬೀದರ್:
ದೆಹಲಿ ನಿಜಾಮುದ್ದೀನ್ ಮಸೀದಿ ಕೊರೊನಾ ಸೋಂಕು ಬೀದರ್ ಗೂ ಆವರಿಸಿದ್ದು, ನಿಜಾಮುದ್ದೀನ್ ನ ಮರ್ಕಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಕೊರೊನಾ ಸೋಂಕಿರುವುದು ಬೆಳಕಿಗೆ ಬಂದಿದೆ.
ಬೀದರ್ ನಿಂದ 27 ಮಂದಿ ನಿಜಾಮುದ್ದೀನ್ ಗೆ ತೆರಳಿದ್ದರು ಎನ್ನಲಾಗಿದ್ದು, ಮಾರ್ಚ್ 8ರಂದು ಅವ್ರೆಲ್ಲ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಮಾರ್ಚ್ 19ರಂದು ಹೈದ್ರಾಬಾದ್-ದೆಹಲಿ ರೈಲಿನಲ್ಲಿ ಬೀದರ್ ಗೆ ವಾಪಸ್ ಬಂದಿದ್ದಾರೆ. ಅವರಲ್ಲಿ ಎಲ್ಲರನ್ನೂ ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.
ಅವರಲ್ಲಿ ನಾಲ್ಕೈದು ಮಂದಿಗೆ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ನಂತರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ವರದಿ ಬಂದಿದ್ದು, 11 ಮಂದಿಗೆ ಕೊರೊನಾ ಇರೋದು ದೃಢಪಟ್ಟಿದೆ.
ಈ ಕುರಿತು ಜಿಲ್ಲಾಧಿಕಾರಿ ಮಹದೇವ್ ಅವರು ಮಾಹಿತಿ ನೀಡಿದ್ದು, ಪರೀಕ್ಷೆಯಲ್ಲಿ 11 ಜನರು ಸೋಂಕಿಗೆ ತುತ್ತಾಗಿದ್ದು ಇನ್ನುಳಿದವರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ