ಚೀನಾ ಅಪಹರಿತ 5 ಮಂದಿ ಭಾರತೀಯರ ಹಸ್ತಾಂತರ!!

ನವದೆಹಲಿ : 

      ಭಾರತ-ಚೀನಾ ಗಡಿ ಭಾಗದ ಗ್ರಾಮದಿಂದ ಕಾಣೆಯಾಗಿದ್ದ ಐವರು ಯುವಕರನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಭಾರತಕ್ಕೆ ಹಸ್ತಾಂತರಿಸಿದೆ.

      ಸೆಪ್ಟೆಂಬರ್ 4 ರಂದು ಈ ಯುವಕರು ಕಾಡಿಗೆ ಹೋಗಿದ್ದರು. ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಯುವಕರ ಜೊತೆ ಇತರರೂ ಕಾಡಿಗೆ ತೆರಳಿದ್ದರು. ಅವರಲ್ಲಿ ಇಬ್ಬರು ಗ್ರಾಮಕ್ಕೆ ಮರಳಿ, ಚೀನಾ ಸೇನೆ ಯುವಕರನ್ನು ಅಪಹರಿಸಿರುವ ಕುರಿತು ಮಾಹಿತಿ ನೀಡಿದ್ದರು. 

      ಯುವಕರು ನಾಪತ್ತೆಯಾದ ವಿಷಯವನ್ನು ಭಾರತೀಯ ಸೇನೆಯು ಹಾಟ್‌ಲೈನ್ ಮೂಲಕ ಚೀನಾ ಸೇನೆಯ ಗಮನಕ್ಕೆ ತಂದಿತ್ತು. ಐವರು ಭಾರತೀಯ ಯುವಕರು ತಮ್ಮ ವಶದಲ್ಲಿರುವುದಾಗಿ ಚೀನಾ ದೃಢಪಡಿಸಿತ್ತು. ಭಾರತ ಸೇನೆಯ ಸತತ ಪರಿಶ್ರಮದಿಂದ ಈಗ ಈ ಯುವಕರು ಭಾರತಕ್ಕೆ ಹಿಂದಿರುಗುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link