ಬೆಂಗಳೂರು :
ಬಿದಿರು ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿ ಹೆಕ್ಟೇರಿಗೆ ತಲಾ 50 ಸಾವಿರ ರೂ. ಸಹಾಯಧನ ನೀಡಲು ತೀರ್ಮಾನಿಸಲಾಗಿದೆ.
‘ವಿಶ್ವ ಬಿದಿರು ದಿನ’ದ ಅಂಗವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಘೋಷಣೆ ಮಾಡಿದ್ದು, 2500 ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಪುನರ್ಬಳಕೆಗೆ ಯೋಗ್ಯವಾಗಿರುವ ಹಾಗೂ ಪ್ಲಾಸ್ಟಿಕ್ ಗೆ ಪರ್ಯಾಯವಾಗಿ ಬಳಸಿಕೊಳ್ಳಬಹುದಾದ ಏಕೈಕ ಪರಿಸರ ಸ್ನೇಹಿ ಬಿದಿರು ಬೆಳೆಯಲು, ಹಾಗೂ ಅದರ ಅಭಿವೃದ್ಧಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿಶ್ವ ಬಿದಿರು ಸಂಸ್ಥೆ ಸೆ. 18 ರಂದು ವಿಶ್ವದೆಲ್ಲೆಡೆ ಬಿದಿರು ದಿನಾಚರಣೆ ಆಚರಿಸಿಕೊಂಡು ಬರುತ್ತಿದೆ.
ಅರಣ್ಯಗಳು ಜಲಸಂರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದು, ಹೀಗಾಗಿ ಅರಣ್ಯಗಳನ್ನು ರಕ್ಷಿಸಿ ಪೋಷಿಸಬೇಕಾದ ಅನಿವಾರ್ಯತೆ ಇದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
