ನಟ ಅಂಬರೀಶ್ ಸಹೋದರ ಆನಂದ್​​ ಕುಮಾರ್ ನಿಧನ!!

ಮೈಸೂರು:

      ರೆಬಲ್ ಸ್ಟಾರ್ ಅಂಬರೀಶ್ ಅವರ ಸಹೋದರ ಎಂ.ಎಚ್. ಆನಂದ್ ಕುಮಾರ್ ಅವರು ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

      ಆನಂದ್ ಕುಮಾರ್ ಮೈಸೂರಿನಲ್ಲಿ ನೆಲೆಸಿದ್ದರು. ಉಸಿರಾಟದ ಸಮಸ್ಯೆ ಇದ್ದ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

      ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಆನಂದ್ ಕುಮಾರ್ ಅಗಲಿದ್ದಾರೆ. ಅವರ ಪುತ್ರ ಅಮೆರಿಕದಲ್ಲಿದ್ದು, ಅವರು ಬಂದ ಬಳಿಕ ಸೋಮವಾರ ಅಂತ್ಯಕ್ರಿಯೆ ನೆರವೇರಲಿದೆ.

      2017 ರಲ್ಲಿ ಅಂಬರೀಶ್ ಅವರ ಸಹೋದರ ಡಾ. ಹರೀಶ್ ನಿಧನರಾಗಿದ್ದರು. 2018 ರಲ್ಲಿ ಅಂಬರೀಶ್ ಹಾಗೂ 2019 ರಲ್ಲಿ ಆನಂದ್ ಕುಮಾರ್ ನಿಧನರಾಗಿದ್ದಾರೆ. ಮೂವರು ಸಹೋದರರು ವರ್ಷ ಒಬ್ಬರಂತೆ ನಿಧನರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap