‘ಏಕತೆಯ ಪ್ರತಿಮೆ’ ಮೂಲಕ ಏಕೀಕರಣದ ಸಂದೇಶ (ವಿಡಿಯೋ)

ದೆಹಲಿ:

      ಪಟೇಲ್‌ ಅವರ ಜನ್ಮದಿನವಾದ ಅಂಗವಾಗಿ ದೇಶಾದ್ಯಂತ ಏಕತೆಯ ಓಟ ನಡೆಯುತ್ತಿದ್ದರೆ, ಗುಜರಾತ್ ನ ನರ್ಮದಾ ನದಿ ತಟದ ಲ್ಲಿ ಪಟೇಲ್‌ಅವರ ಪ್ರತಿಮೆಯ ಲೋಕಾರ್ಪಣೆಯ ಸಂಭ್ರಮ. 182 ಮೀಟರ್‌ ಎತ್ತರದ ವಲ್ಲಭಭಾಯ್ ಪಟೇಲ್ ಅವರ ‘ಏಕತೆಯ ಪ್ರತಿಮೆ’ ಅನಾವರಣಗೊಂಡಿದೆ.

ಇಂದು ಸರ್ದಾರ್ ಪಟೇಲ್ ರ ಪುತ್ತಳಿ ಅನಾವರಣ

      ಸರ್ದಾರ್​ ಜೀ ಅವರ 143ನೇ ಜನ್ಮ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಬುಧವಾರ ಕೆವಾಡಿಯಾ ಪಟ್ಟಣಕ್ಕೆ ಆಗಮಿಸಿದ ಪ್ರಧಾನಿ ಅವರು ವೇದಿಕೆ ಹಿಂಭಾಗದಲ್ಲಿನ ಎಲ್​ಇಡಿ ಪರದೆಯ ಮೇಲೆ ಸರ್ದಾರ್​ ಜೀ ಅವರ ಏಕತಾ ಪ್ರತಿಮೆಯ ಮೇಕಿಂಗ್​ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರತಿಮೆಯನ್ನು ಅನಾವರಣಗೊಳಿಸಿದರು.

       ಗುಜರಾತ್‌ನ ನರ್ಮದಾ ಜಿಲ್ಲೆಯ ಸಾಧು ಬೆಟ್‌ ದ್ವೀಪದಲ್ಲಿ ನಿರ್ಮಿಸಲಾದ ಸರ್ದಾರ್ ಸರೋವರ್ ಅಣೆಕಟ್ಟಿನ ಎದುರು ಎದ್ದು ನಿಂತಿರುವ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.
      ಸರ್ದಾರ್ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆ ಲೋಕಾರ್ಪಣೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಅಮರ್ ರಹೇ ಎಂಬ ಘೋಷಣೆ ಕೂಗಿದರು. ದೇಶದ ‘ಏಕತೆಗೆ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ಈ ಐತಿಹಾಸಿಕ ಕ್ಷಣಕ್ಕೆ ದೇಶದ ಜನತೆಗೆ ಮೋದಿ ಅಭಿನಂದನೆ ಸಲ್ಲಿಸಿದರು.
      ದೇಶದ ಮೊದಲ ಉಪ ಪ್ರಧಾನಿ ಪಟೇಲ್‌ ಅವರು ಭಾರತದ ಏಕೀಕರಣದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಹೀಗಾಗಿ ಪ್ರತಿಮೆಗೆ ‘ಏಕತೆಯ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ. ಸರ್ದಾರ್‌ ಪಟೇಲ್‌ ಅವರ ಪ್ರತಿಮೆಯ ಮೂಲಕ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ‘ಏಕೀಕರಣ’ದ ಸಂದೇಶ ಸಾರಿದ್ದಾರೆ.
      ಹರಿದುಹಂಚಿ ಹೋಗಿದ್ದ ಭಾರತದ ವಿವಿಧ ಪ್ರಾಂತ್ಯಗಳನ್ನು ಒಗ್ಗೂಡಿಸಿ ಏಕತೆಯ ಪರಿಕಲ್ಪನೆ ನೀಡಿದ ಪಟೇಲ್ ಅವರ ಅನನ್ಯ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಈ ಮೂರ್ತಿಯನ್ನು ಅನಾವರಣಗೊಳಿಸಲಾಗುತ್ತಿದೆ. 
     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap