ಮೈಸೂರು :
ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಅರ್ಜುನ್ ಜನ್ಯ ಅವರಿಗೆ ಬುಧವಾರ ಮಧ್ಯರಾತ್ರಿ ಲಘು ಹೃದಯಾಘಾತ ಸಂಭವಿಸಿತ್ತು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಪೂರ್ತಿ ಅವರನ್ನು ಐಸಿಯುನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗಿದೆ. ಅರ್ಜುನ್ ಜನ್ಯ ಅವರ ಆರೋಗ್ಯ ಇಂದು ಸುಧಾರಿಸಿದ್ದು, ಇಂದು ಡಿಸ್ಚಾರ್ಜ್ ಮಾಡಲಾಗಿದೆ.
ಅರ್ಜುನ್ ಜನ್ಯ ಅವರು ಕಳೆದ ಮಂಗಳವಾರ ಅತಿಯಾದ ಗ್ಯಾಸ್‍ಟ್ರಿಕ್ ಪರಿಣಾಮ ಆಸ್ಪತ್ರೆ ಗೆ ಚಿಕಿತ್ಸೆಗೆ ಬಂದಿದ್ದರು. ಆಗ ಹೃದಯ ಪರೀಕ್ಷೆ ನಡೆಸಿದ್ದಾಗ ಹೃದಯಾಘಾತ ವಾಗಿರುವುದು ಸ್ಪಷ್ಟವಾಗಿತ್ತು. ಅವರ ಹೃದಯದಲ್ಲಿ ಶೇಕಡಾ 99 ರಷ್ಟು ಬ್ಲಾಕ್ ಇತ್ತು. ಹೀಗಾಗಿ ಮಂಗಳವಾರ ರಾತ್ರಿಯೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿದ್ದರು.
ಸದ್ಯ ಅರ್ಜುನ್ ಜನ್ಯ ಅವರಿಗೆ ಇನ್ನೂ ಕನಿಷ್ಟ 4 ವಾರ ಸಂಪೂರ್ಣ ವಿಶ್ರಾಂತಿ ತೆಗೆದು ಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ