ಮುಸ್ಲೀಂ ಸಮುದಾಯದ ಆಶಾಕಿರಣ ಸಿದ್ದರಾಮಯ್ಯ:ಜಮೀರ್ ಅಹಮ್ಮದ್ ಖಾನ್

ಬೆಂಗಳೂರು

        ಮುಸ್ಲೀಂ ಸಮುದಾಯದ ಆಶಾಕಿರಣವಾಗಿರುವ ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.

        ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜನಮೆಚ್ಚಿದ ನಾಯಕ, ಇಡೀ ದೇಶದಲ್ಲೇ ಸಿದ್ದರಾಮಯ್ಯ ಅವರಂತಹ ನಾಯಕ ಸಿಗುವುದಿಲ್ಲ. ನಾಯಕ ಅಂದರೆ ಹೀಗರಬೇಕು ಎಂದರು.

          ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 3100 ಕೋಟಿ ರೂ. ಗಳ ಅನುದಾನ ನೀಡಿದ್ದಾರೆ. ಒಂದು ವೇಳೆ ಈಗ ಮತ್ತೊಮ್ಮೆ ಮುಖ್ಯಮಂತ್ರಿ ಆಗಿದ್ದರೆ 10 ಸಾವಿರ ಕೋಟಿ ಕೊಡುತ್ತಿದ್ದರು. ಇಂತಹ ಜನ ನಾಯಕನನ್ನು ಯಾರು ಮರೆಯುವುದಿಲ್ಲ ಎಂದರು.

           ರಾಜ್ಯದ ಯಾವುದೇ ಮೂಲೆಗೆ ಹೋದರೂ ಅಲ್ಪಸಂಖ್ಯಾತರು ಸಿದ್ದರಾಮಯ್ಯ ಅವರನ್ನು ನೆನೆಯುತ್ತಾರೆ. ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಅಪಾರವಾದ ಕಾಳಜಿಯಿದೆ. ನಾವು ಅವರೊಂದಿಗೆ ಸಾಯುವವರೆಗೂ ಇರುತ್ತೇವೆ ಎಂದು ಜಮೀರ್ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.

           ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಸುಭದ್ರವಾಗಿ ಆಡಳಿತ ನಡೆಸಲಿದೆ. ಸರ್ಕಾರದ ಅವಧಿ ಮುಗಿಯುವವರೆಗೂ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿರಲಿದ್ಧಾರೆ. ಇದಕ್ಕೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿದೆ. ಹಾಗಾಗಿ ಹಿರಿಯರ ಆಶಯದಂತೆಯೇ ಸರ್ಕಾರ ನಡೆಯಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link